ಯರಗಟ್ಟಿ

ಡಿ. ದೇವರಾಜ ಅರಸು ಸಾಮಾಜಿಕ ಸುಧಾರಣೆ ಹರಿಕಾರ

ಡಿ. ದೇವರಾಜ ಅರಸು ಸಾಮಾಜಿಕ ಸುಧಾರಣೆ ಹರಿಕಾರ

ಲೋಕದರ್ಶನ ವರದಿ

ಯರಗಟ್ಟಿ 20: ಸಾಮಾಜಿಕ ಸುಧಾರಣೆಯ ಹರಿಕಾರ ದಿ. ಡಿ. ದೇವರಾಜ ಅರಸು ಅವರು ಗೇಣಿ ಪದ್ಧತಿ ವಿಮೋಚನೆ, ಉಳುವವನೆ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆ ಜಾರಿಗೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ತಹಶೀಲ್ದಾರ ಎಂ. ಎನ್. ಮಠದ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ದಿ. ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಭಾನುವಾರ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆ ಬೋಧಿಸಿದರು.

ಉಪ ತಹಶೀಲ್ದಾರ ಸಂತೋಷ ಜಾದವ, ಸಿಬ್ಬಂದಿ ವರ್ಗದವರಾದ ಶಾಹೀನ ಮಿಸರಿಕೋಟಿ, ಎಲ್. ಸಿ. ತಳವಾರ, ಸ್ವರೂಪ ಚಪಳಿ, ಕೆಂಪಣ್ಣಾ ಗಡ್ಕರಿ, ಲಕ್ಕಪ್ಪ ಪೂಜೇರ, ಶಿವಾನಂದ ಮಠಪತಿ, ಶ್ರೀಕಾಂತ ತಳವಾರ, ವಿಜಯ ಉಪ್ಪಿನ, ಭಾರತಿ ಬಿರಾದಾರಗೌಡರ ಸೇರಿದಂತೆ ಅನೇಕ ಇದ್ದರು 

ಸುದ್ದಿ ಓದಿ