ಬೊಜ್ಜು ಕರಗಿಸಲು ಸೈಕ್ಲಿಂಗ್ ಮಾಡಿ
ಕಾರವಾರ 15: ಕೇಂದ್ರ ಸಕರ್ಾರದ ಫಿಟ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ನೆಹರೂ ಯುವ ಕೇಂದ್ರ, ಕಾರವಾರ ಹಾಗೂ ಎನ್.ಪಿ.ಸಿ.ಐ.ಎಲ್?ಕೈಗಾ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ 21 ದಿನಗಳ ಸೈಕ್ಲೋತೊನ್ ಚಾಲೆಂಜ್ ಇಂದು ಆರಂಭವಾಯಿತು. ಕೈಗಾ ಅಣುಸ್ಥಾವರದ ಸೈಟ್ ಡೈರೆಕ್ಟರ್ ಆರ್. ಸತ್ಯನಾರಾಯಣ್ ಸೈಕ್ಲೋತೊನ್ಗೆ ಹಸಿರು ನಿಶಾನೆ ತೋರಿಸಿದರು. ನಂತರ ಮಾತನಾಡಿದ ಅವರು ಕೊರೋನಾ ಲಾಕ್ಡೌನ್ನಿಂದ ಕುಳಿತಲ್ಲೇ ಕಾರ್ಯನಿರ್ವಹಿಸುವ ಕಾರಣ ಮನುಷ್ಯರಲ್ಲಿ ಆಲಸ್ಯ ಬೆಳೆದಿದೆ. ಹೆಚ್ಚಿನ ದೈಹಿಕ ಶ್ರಮವಿಲ್ಲದ ಜೀವನ ಶೈಲಿಯಿಂದ ಬಂದ ಸ್ಥೂಲಕಾಯರಾಗಿದ್ದಾರೆ. ಕಾರಣ ಬೊಜ್ಜನ್ನೂ ಸೈಕ್ಲಿಂಗ್ ಮೂಲಕ ಕಡಿಮೆ ಮಾಡಬಹುದು ಎಂದರು.
ಹೃದಯ, ಮಾಂಸಖಂಡಗಳು, ಕೀಲುಗಳ ಆರೋಗ್ಯಕ್ಕೂ ಸೈಕ್ಲಿಂಗ್ ಅತ್ಯುತ್ತಮ ಚಟುವಟಿಕೆ. ಅಷ್ಟೇ ಅಲ್ಲದೇ ಮಾನಸಿಕ ಒತ್ತಡ? ಖಿನ್ನತೆಯನ್ನಿದು ಹೊಡೆದೋಡಿಸುತ್ತದೆ. ಸೈಕ್ಲಿಂಗ್ ಪರಿಸರ ಸ್ನೇಹಿಯಾಗಿದ್ದು ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಹೀಗೆ ಸೈಕ್ಲಿಂಗ್ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ ಪರಿಸರ ಸಂರಕ್ಷಣೆಯನ್ನೂ ಮಾಡಬಹುದು ಎಂದರು.
ಯಾವುದೇ ವಯಸ್ಸಿನ ಮಿತಿಯಿಲ್ಲದೇ ಎಲ್ಲ ನಾಗರಿಕರೂ ತಮ್ಮ ಸೈಕಲ್ ನೊಂದಿಗೆ ಸೈಕ್ಲೋತೋನ್ ನಲ್ಲಿ ಭಾಗವಹಿಸಬಹುದು. ಸಮಾರೋಪ ಸಮಾರಂಭದಲ್ಲಿ ಬಹುಮಾನವನ್ನೂ ವಿತರಿಸಲಾಗುವುದು. ನಗರದ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ವಯಸ್ಕರೂ ಕೂಡ ಮುಕ್ತವಾಗಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಕರೆ ನೀಡಿದರು. ಸುಮಾರು 50ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕೆ.ಎಸ್. ಆರ್ ಕೈಗಾದ ಆಲ್ಟನರ್ೇಟ್ ಚೇರ್ಮನ್ ಆರ್.ವಿ. ಮನೋಹರ್, ಹಾಗೂ ಸಿ.ಎಸ್.ಆರ್ ಮೆಂಬರ್ ಸೆಕ್ರೆಟರಿ ಜಗನ್ .ಜೆ ಹಾಗೂ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಆಗಿರುವ ಯಶವಂತ್ ಯಾದವ್ ,ಅಕೌಂಟೆಂಟ್ ಆಗಿರುವ ಮೀರಾ ನಾಯ್ಕ ಮತ್ತು ಕಾರ್ಯಕರ್ತರಾದ ಪೂಜಾ ಕಳಸ ಪರಸಪ್ಪ ಹೊನ್ನೂರ್,ಅನಿಲ್ ರೇವಣಕರ್ ಉಪಸ್ಥಿತರಿದ್ದರು.