ರಾಣೆಬೆನ್ನೂರ

ಸೈಕ್ಲಿಂಗ್‍ದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ

ಸೈಕ್ಲಿಂಗ್‍ದಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ
ತಾಲೂಕಿನ ಚಳಗೇರಿ ಗ್ರಾಮದ ಜೈನ್ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ಸೈಕ್ಲಿಂಗ್ ಜಾಥಾಕ್ಕೆ ಶಾಸಕ ಅರುಣಕುಮಾರ ಪೂಜಾರ ಚಾ

ರಾಣಿಬೆನ್ನೂರ 01: ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಕೂಡ ಸುಧಾರಿಸುತ್ತದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಭಾರತ ಸರ್ಕಾರದ ಫಿಟ್‍ಇಂಡಿಯಾ ಉದ್ದೇಶದ ಅಡಿಯಲ್ಲಿ ರವಿವಾರ ತಾಲೂಕಿನ ಚಳಗೇರಿ ಗ್ರಾಮದ ಜೈನ್ ಪಬ್ಲಿಕ್ ಶಾಲೆಯಲ್ಲಿ ನಗರದ ಸೈಕ್ಲಿಂಗ್ ಕ್ಲಬ್ ಮತ್ತು ಜೈನ್ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಸೈಕ್ಲಿಂಗ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸ್ಕೂಲ್‍ನ ಆಡಳಿತ ಮಂಡಳಿ ಸದಸ್ಯ ಸಂದೀಪ ಜೈನ ಮಾತನಾಡಿ, ‘ನೆದರ್‍ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳು ಅತಿ ಹೆಚ್ಚು ಸೈಕಲ್ ಬಳಕೆ ಮಾಡುತ್ತಿವೆ. ಇದರಿಂದ ಉತ್ತಮ ಪರಿಸರ ಮತ್ತು ಆರೋಗ್ಯ ಸ್ಮಧಾರಣೆಯಾಗುತ್ತದೆ ಎಂದರು.

ಆಡಳಿತ ಮಂಡಳಿಯ ಸದಸ್ಯ ಪ್ರೀತೇಶ್ ಜೈನ್, ಪ್ರಾಂಶುಪಾಲರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಜಾಥಾವು ಜೈನ್ ಪಬ್ಲಿಕ್ ಶಾಲೆಯಿಂದ ನಗರದ ಚೌಡೇಶ್ವರಿ ದೇವಸ್ಥಾನದ ವರೆಗೆ ಫಿಟ್ ಇಂಡಿಯಾ ಸೈಕ್ಲೋಥಾನ್‍ನ್ನು ನಡೆಸಿದರು

ಸುದ್ದಿ ಓದಿ