ಶಿಗ್ಗಾವ್

ಮಿಷನ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಅಭಿಯಾನ

ಮಿಷನ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಅಭಿಯಾನ

ಲೋಕದರ್ಶನ ವರದಿ 

ಶಿಗ್ಗಾವಿ 12: ಮಿಷನ್ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸೈಕ್ಲಿಂಗ್ ಅಭಿಯಾನ ಪ್ರಾರಂಭಿಸಿದ ಸವಣೂರ ತಾ.ಪಂ.ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ರವರನ್ನು ತಾಲೂಕಿನ ಬಿಸನಳ್ಳಿ ಗ್ರಾಮದ ಮಾರ್ಗಮಧ್ಯದಲ್ಲಿ ನಾರಾಯಣಪುರ ಗ್ರಾ.ಪಂ. ಹಾಗು ಬಿಸನಳ್ಳಿ ಶ್ರೀಕಾಶಿ ಶಾಖಾ ಮಠದ ಆಶ್ರಯದಲ್ಲಿ ಅವರನ್ನು ಸನ್ಮನಾನಿಸಿ ಅವರ ಮೇಲೆ ಹೂ ಮಳೆ ಸುರಿಸುವಮೂಲಕ ಭವ್ಯವಾಗಿ ಬರಮಾಡಿಕೊಂಡರು. 

     ಸುದ್ದಿಗಾರರನ್ನುದ್ದೇಸಿಸಿ ಮಾತನಾಡಿದ ಅಮರಾಪೂರರವರು, ಆಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಾಶ್ಮೀರದಿಂದ ನ. 2ರಿಂದ ನಮ್ಮ ಸೈಕಲ್ ಯಾತ್ರೆ ಪ್ರಾರಂಭವಾಗಿದ್ದು, ಪ್ರತಿದಿನ 3 ನೂರು ಕಿ.ಮಿ. ಪ್ರಯಾಣಿಸುತ್ತಾ ಬಂದಿದ್ದು, ನ.14 ಕ್ಕೆ ಕನ್ಯಾಕುಮರಿ ತಲುಪುವ ಗುರಿ ಹೊಂದಿದ್ದೇನೆ. ಈ ಒಂದು ಸೈಕಲ್ ಜಾಥಾದ ಉದ್ದೇಶ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆಯ ಎಂ.ಜಿ.ಎನ್‌.ಆರ್‌.ಇಜಿ.  ರೈತರ ಕ್ರೀಯಾ ಯೋಜನೆ, ಎಬಿಯಂ.ಎನ್‌.ಆರ್‌.ಎಲ್‌. ಎಂ. ಸೇರಿದಂತೆ ವಿವಿಧ ಯೋಜನೆಗಳ ಕುರಿತು ರೈತರಿಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸೈಕಲ್ ಜಾಥಾ ಕೈಗೊಳ್ಳಲಾಗಿದೆ. ಅದಲ್ಲದೆ, ಇಂದಿನ ಯುವ ಸಮೂಹ ಮಾದಕ ದ್ರವ್ಯಗಳ ವ್ಯಸನಿಗಳಾಗುತ್ತಿದ್ದು, ವಿಷಾದಕರ ಸಂಗತಿಯಾಗಿದ್ದು, ಅದರ ಬಗ್ಗೆ ಕೂಡಾ ಯುವಕರಲ್ಲಿ ಜಾಗೃತಿ ಮೂಡಿಸಿ ಮಾದಕ ವ್ಯಸನಿಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದಾಗಿ ಹೇಳಿದರು. 

     ಆಜಾದಿಕ ಅಮೃತ ಮಹೋತ್ಸವ ಅಂಗವಾಗಿ ಈ ಒಂದು ಸೈಕಲ್ ಜಾಥಾವನ್ನು ಸಾಮಾಜಿಕ ಕಳಕಳಿಯನ್ನಿಟ್ಟುಕೋಂಡು ನನ್ನ ಸ್ನೇಹಿತ ಮುರಗೇಶ ಚಿನ್ನಣ್ಣವರ ರೋಂದಿಗೆ ಈ ಸೈಕಲ್ ಜಾಥಾವನ್ನು ಪ್ರಾರಂಭಿಸಬೇಕಾಗಿತ್ತು. ಆದರೆ ಚಿನ್ನಣ್ಣವರಲ್ಲಿ ಆರೋಗ್ಯ ಸಮಸ್ಯ ಎದುರಾಗಿದ್ದರಿಂದ ನಾನೋಬ್ಬನೇ ಈ ಯಾತ್ರೆಯನ್ನು ಕೈಗೋಂಡಿರುವುದಾಗಿ ತಿಳಿಸಿದರು. ಪಂಜಾಬ, ಹರಿಯಾಣ, ರಾಜಾಸ್ಥಾನ, ಗುಜರಾತ, ಮಹರಾಷ್ಟ್ರ ಮೂಲಕ ಕರ್ನಾಟಕಕ್ಕೆ ಆಗಮಿಸಿದ್ದು, ಬರುವ ಮಾರ್ಗದಲ್ಲೇಲ್ಲಾ ರೈತರು, ಸಂಘಸಂಸ್ಥೆಗಳ ಪದಾದಿಕಾರಿಗಳು, ಸಾರ್ವಜನಿಕರು ಭವ್ಯವಾಗಿ ಬರಮಾಡಿಕೋಂಡು ಪ್ರೋತ್ಸಾಹಿಸುತ್ತಿದ್ದಾರೆ. ಈ ನನ್ನ ಸೈಕಲ್ ಜಾಥಾಕ್ಕೆ ಅನುಮತಿ ನೀಡಿದ, ನಮ್ಮ ಇಲಾಖೆ ಅಧಿಕಾರಿಗಳು ಹಾಗು ಸಿ.ಎಮ್‌.ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಜಿವರಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಎಲ್ಲರಿಂದಲೂ ಸನ್ಮಾನ ಸ್ವೀಕರಿಸಿ, ಪ್ರಯಾಣ ಬೆಳೆಸಿದರು.  

     ನಾರಾಯಣಪುರ ಗ್ರಾ.ಪಂ.ಪಿ.ಡಿ.ಒ. ಈರಣ್ಣ ಗಾಣಗಿ, ಶಿದ್ಧಲಿಂಗೇಶ ಕಲಿವಾಳ, ಗದಿಗಯ್ಯ ಹಿರೇಮಠ, ಶಂಭುಲಿಂಗಪ್ಪ ಆಜೂರ, ಮೌನೇಶ ಇಚ್ಚಂಗಿ, ಮಲ್ಲೇಶಪ್ಪ ಶೆಟ್ಟರ,  ಸಿರಾಜ ಅಹಮ್ಮದ ಮುಲ್ಲಾ, ಚನಬಸಪ್ಪ ಕುರಗೋಡಿ, ಬಸವರಾಜ ಬಡಿಗೇರ, ಗದಿಗೇಪ್ಪ ಓಲೆಕಾರ, ಸತೀಷ ಚಂದ್ರಗೇರಿ, ಮುರಗೇಶ ಆಜೂರ, ಗುರುಶಾಂತಪ್ಪ ನರೇಗಲ್ ಸೇರಿದಂತೆ ಪಾಠಶಾಲೆಯ ವಟುಗಳು ಸಾರ್ವಜನಿಕರು ಇದ್ದರು. 


ಸುದ್ದಿ ಓದಿ