ಗಂಗಾವತಿ

ಯುವಕನಿಂದ ಆಂಜನಾದ್ರಿಯಿಂದ ಅಯೋಧ್ಯಾವರೆಗೆ ಸೈಕಲ್ ಯಾತ್ರೆ

ಯುವಕನಿಂದ ಆಂಜನಾದ್ರಿಯಿಂದ ಅಯೋಧ್ಯಾವರೆಗೆ ಸೈಕಲ್ ಯಾತ್ರೆ

ಗಂಗಾವತಿ 30:ರಾಜು ಕೊತ್ತ ಎಂಬ ಯುವಕ ಲೋಕ ಕಲ್ಯಾಣಾರ್ಥವಾಗಿ ಇತಿಹಾಸ ಪ್ರಸಿದ್ದಿ ಹೊಂದಿರುವ ತಾಲೂಕಿನ ಚಿಕ್ಕರಾಂಪುರ ಹತ್ತಿರದ ಆಂಜನಾದ್ರಿ(ಬೆಟ್ಟ)ಪರ್ವತದಿಂದ ಅಯೋಧ್ಯಾ ರಾಮಮಂದಿರವರೆಗೆ ಜು.1 ರಿಂದ ಯಾತ್ರೆ ಕೈಗೊಂಡಿದ್ದಾರೆ. 

ಆಂಜನಾದ್ರಿ ಬೆಟ್ಟದಲ್ಲಿ ಆಂಜನೇಯನಸ್ವಾಮಿ ದೇವಸ್ಥಾನ ಇದೆ. ಈ ಪ್ರದೇಶದಲ್ಲಿ ಆಂಜನೇಯ ಜನಿಸಿರುವ ಕಾರಣದಿಂದ ಹನುಮನನಾಡು ಎಂದು ಕರೆಯುತ್ತಾರೆ. ಪೌರಾಣಿಕ ಹಿನ್ನಲೆ ಹೊಂದಿರುವ ಪರ್ವತ ರಾಮಾಯಣ ಕಾಲದ್ದಾಗಿದೆ. 

ವರ್ಷ ಪೂರ್ತಿ ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ರಾಜು ಕೊತ್ತ ಅವರ ತಂದೆ ಹೊಸಪೇಟೆಯಲ್ಲಿ ಆಂಜನೇಯ ದೇವಸ್ಥಾನ ಅರ್ಚಕರಾಗಿದ್ದಾರೆ. ಸೈಕಲ್‌ನಲ್ಲಿ ಈ ಯಾತ್ರೆ ಕೈಗೊಂಡಿರುವ ಒಂದು ತಿಂಗಳು ಪರ್ಯಂತ ಇದನ್ನು ನಡೆಸಲಿದ್ದಾರೆ. ಈ ಮುಂಚೆ ಶಬರಿಮಲೈಗೆ ಸೈಕಲ್‌ನಲ್ಲಿ ತೆರಳಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ. ಯುವಕನಿಗೆ ಈ ಸಾಹಸ ಯಾತ್ರೆಗೆ ಸಂಘ ಪರಿವಾರದ ಮುಖಂಡ ಕುಮಾರ್ ಹೂಗಾರ ಪ್ರೇರಣೆಯಾಗಿದ್ದಾರೆ. ಯುವಕನ ಮೊಬೈಲ್ ನಂ.7353428921. 


ಸುದ್ದಿ ಓದಿ