ಕಾಂಗ್ರೆಸ್ ಕಾರ್ಯಕರ್ತರಿಂದ ಸೈಕಲ್ ಜಾಥಾ
ಶಿಗ್ಗಾವಿ 06: ಶಿಗ್ಗಾವಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇದೇ ಜುಲೈ 7 ರಂದು ಬೆಳಿಗ್ಗೆ 10 ಘಂಟೆಗೆ ಕೇಂದ್ರ ಸರ್ಕಾರವು, ಡೀಸೆಲ್ ಬೆಲೆ ಏರಿಸುತ್ತಾ ರೈತರ ಬೆನ್ನೆಲುಬು ಮುರಿಯುತ್ತಿರುವ ಕೇಂದ್ರ ಬಿಜೆಪಿ ಸರಕಾರದ ದುರಾಡಳಿತವನ್ನ ಖಂಡಿಸಿ ಎಚ್ಚರಿಖೆಯನ್ನು ಮುಟ್ಟಿಸುವ ಪ್ರಯುಕ್ತ ಪಟ್ಟಣದಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡಿದೆ ಎಂದು ಶಿಗ್ಗಾವಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಂ ಎನ್ ವೆಂಕೋಜಿ ತಿಳಿಸಿದ್ದಾರೆ.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ನಾಳೆ ಪಟ್ಟಣದ ಮಧ್ಯಭಾಗವಾದ ಸಂತೆ ಮೈದಾನದಿಂದ ಹಳೆ ಪೇಟೆ ಮಾರ್ಗವಾಗಿ ದ್ಯಾಮವ್ವನ ಗುಡಿ, ಹಳೆ ಬಸ್ ಸ್ಟ್ಯಾಂಡ್ ಮೂಲಕ ಹೊಸ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಅಂತ್ಯಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಮುಂಚೂಣಿ ನಾಯಕರುಗಳು ಜಾತಾದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತಿಳಿಸಿದ್ದಾರೆ.
ಈ ಸಭೆಯಲ್ಲಿ ಸೋಮಣ್ಣ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ, ಪ್ರಕಾಶ ಹಾದಿಮನಿ ಷಣ್ಮುಖ ಶಿವಳ್ಳಿ, ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ, ಹನುಮರೆಡ್ಡಿ ನಡುವಿನಮನಿ, ಶ್ರೀಕಾಂತ ಪೂಜಾರ, ಶಿವಾನಂದ ಬಾಗೂರ, ಹನುಮಂತ ಬಂಡಿವಡ್ಡರ, ಮಂಜುನಾಥ ಮಣ್ಣಣ್ಣವರ, ವಸಂತಾ ಬಾಗೂರ, ಸುಧೀರ ಲಮಾಣಿ, ಬಿ.ಸಿ.ಪಾಟೀಲ ಸೇರಿದಂತೆ ಕಾರ್ಯಕರ್ತರು ಉಪಸ್ಥಿರಿದ್ದರು.