ಯರಗಟ್ಟಿ

ಗೆಟ್ ಓಟ್ ಎಂದವರಿಂದಲೇ ಕಟೌಟ್ ಹಾಕಿಸಿಕೊಳ್ಳಬೇಕು: ತುರಡಗಿ

ಗೆಟ್ ಓಟ್ ಎಂದವರಿಂದಲೇ ಕಟೌಟ್ ಹಾಕಿಸಿಕೊಳ್ಳಬೇಕು: ತುರಡಗಿ

ಯರಗಟ್ಟಿ 02: ವ್ಯಕ್ತಿಯು ತನ್ನ ವೈಯಕ್ತಿಕ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಗೆಟ್ ಓಟ್ ಎಂದವರಿಂದಲೇ ಕಟೌಟ್ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜೆ.ಎಸ್‌.ಎಸ್‌. ಕಾಲೇಜಿನ ಪ್ರಾಧ್ಯಾಪಕ ಡಾ. ಬಸವರಾಜ ತುರಡಗಿ ಹೇಳಿದರು. 

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆದರ್ಶಗಳನ್ನು ಗೌರವಿಸಿ ಬದುಕಿದವರು ಮಾತ್ರ ಚರಿತ್ರೆಯ ಭಾಗವಾಗಿದ್ದಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರು ಇಂತಹ ಮಹನೀಯರಾಗಿದ್ದಾರೆ. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಸಾಗಲು ವೈಯಕ್ತಿಕ, ಸಾಮಾಜಿಕ ಹಾಗೂ ವಿಶ್ವಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು' ಎಂದು ಪ್ರತಿಪಾದಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ  ವಿತರಿಸಲಾಯಿತು. 

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಸುನಂದಾ ಮಾದರ, ಶಿದ್ಲಿಂಗಪ್ಪ ಎಸ್‌.ಜಿ, ಡಾ. ರಾಜಶೇಖರ ಬಿರಾದಾರ, ಡಾ. ಗುರುಪ್ರಸಾದ ಗಣೇಶಕರ, ಬಸವರಾಜ ಬೀಳಗಿ, ಕಲ್ಲಪ್ಪ ಹಂದಿಗುಂದ, ವಿಜಯಲಕ್ಷ್ಮೀ ಬದ್ದಿ ಹಾಗೂ ಮಹಾಂತೇಶ ತಂಬಾಕೆ ಸೇರಿದಂತೆ ಮಹಾವಿದ್ಯಾಲಯದ ಎಲ್ಲಾ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ