ಅಡಿಕೆ, ಕಾಳು ಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯ
ಕಾರವಾರ 15: ಮುಂಗಾರು ಹಂಗಾಮಿನಲ್ಲಿ2021-22ನೇ ಸಾಲಿನ ಪರಿಷ್ಕೃತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲು ಸರ್ಕಾರದ ಆದೇಶದ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದ್ದು, ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಡಿಕೆ ಬೆಳೆಯ ವಿಮಾ ಮೊತ್ತರೂ. 1,28,000 ಪ್ರತಿ ಹೆಕ್ಟೇರ್ಆಗಿದ್ದು, ರೈತರು ಭರಿಸುವ ಪ್ರೀಮಿಯಂ ಮೊತ್ತ ಶೇ 5 ರಂತೆರೂ. 6,400 ಪ್ರತಿ ಹೆಕ್ಟೇರ್ಆಗಿರುತ್ತದೆ. ಕಾಳುಮೆಣಸು ಬೆಳೆಯ ವಿಮೆ ಮೊತ್ತರೂ. 47,000 ಪ್ರತಿ ಹೆಕ್ಟೇರ್ಗೆಆಗಿದ್ದು, ರೈತರುರೂ.2,350/ ಹೆಕ್ಟೇರ್ಗೆ (ವಿಮಾ ಮೊತ್ತದ 5ಅ) ಪಾವತಿಸಬೇಕಾಗುತ್ತದೆ.ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದರೈತರು ವಿಮಾಕಂತನ್ನು ಪಾವತಿಸಲುಜೂನ್ 30 ಕೊನೆಯ ದಿನವಾಗಿರುತ್ತದೆ.
ಬೆಳೆ ಸಾಲ ಪಡೆಯುವರೈತರು ವಿಮೆಗೆ ಒಳಪಡಲು ಇಚ್ಚೆ ಇಲ್ಲದೇಇದ್ದಲ್ಲಿ ಆ ಪ್ರಕಾರವಾಗಿ ಲಿಖಿತವಾಗಿ ಅಂತಿಮ ದಿ. 7 ದಿನದ ಮೊದಲು ತಮ್ಮ ಸಾಲವಿರುವ ಬ್ಯಾಂಕಿನ ಶಾಖೆಗೆ ಮಾಹಿತಿ ನೀಡಬೇಕಿರುತ್ತದೆ.
ನಿಗದಿತಅರ್ಜಿ ನಮೂನೆ, ಬ್ಯಾಂಕ್ ಪಾಸ್ ಪುಸ್ತಕದಯಥಾ ಪ್ರತಿ, ಬೆಳೆ ನಮೂದಿರುವ ಪಹಣಿ ಪತ್ರಿಕೆ, ಸ್ವಯಂ ದೃಢೀಕರಣ ಮತ್ತು ಆಧಾರ್ಕಾರ್ಡ್ನ ಪ್ರತಿಯೊಂದಿಗೆ ಸಂಬಂಧಿತ ಬ್ಯಾಂಕ್ ಶಾಖೆಯಲ್ಲಿಅಂತಿಮ ದಿನಾಂಕದ ಒಳಗಾಗಿ ನೊಂದಾವಣೆ ಮಾಡಿಕೊಳ್ಳಬಹುದಾಗಿದೆ.
ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತೋಟಗಾರಿಕಾ ಇಲಾಖೆಯ ಕಛೇರಿಅಥವಾ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದಾಗಿದೆ.