ಶಿಗ್ಗಾವ್

ಬೆಳೆ ಹಾನಿ: ಪರಿಹಾರಕ್ಕೆ ಒತ್ತಾಯ

ಬೆಳೆ ಹಾನಿ: ಪರಿಹಾರಕ್ಕೆ ಒತ್ತಾಯ

ಲೋಕದರ್ಶನ ವರದಿ 

ಶಿಗ್ಗಾವಿ : ದೇಶದ ಬೆನ್ನಲುಬು ರೈತ ಇಡೀ ಮಾನವ ಕುಲಕ್ಕೆ ಅನ್ನ ಹಾಕುವ ಕೆಲಸ ರೈತ ಮಾಡುತ್ತಾನೆ ಆದರೆ ಸುಮಾರು ವರ್ಷಗಳಿಂದ ನೆರೆಹಾವಳಿ, ಅತಿಯಾದ ಮಳೆ, ಕೊರೋನಾ ರೋಗದ ಹಿನ್ನಲೆಯಲ್ಲಿ ರೈತರ ಸ್ಥಿತಿ ಗಂಭೀರವಾಗಿದ್ದು ಯಾರಿಗೂ ಹೇಳದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಸೇನಾ ಜಿಲ್ಲಾಧ್ಯಕ್ಷ ವರುಣಗೌಡ್ರ ಪಾಟೀಲ ಹೇಳಿದರು. 

ತಾಲೂಕಿನ ಸುದ್ದಿಗಾರರೊಂದಿಗೆ ಮಾತನಾಡಿ ಸುಮಾರು 15 ದಿನಗಳಿಂದ ರಾಜ್ಯಾದ್ಯಂತ ಬಿಡದೇ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಕಟಾವಿಗೆ ಬಂದ ಹತ್ತಿ, ಭತ್ತ, ಗೋವಿನ ಜೋಳದಂತಹ ಅನೇಕ ಬೆಳೆಗಳು ಅತಿಯಾದ ಮಳೆಯಿಂದ ಸಾಕಷ್ಟು ಹಾನಿಗೊಳಗಾಗಿವೆ ಇದರಿಂದ ರೈತರ ಸಾಕಷ್ಟು ಸಂಕಷ್ಟದಲ್ಲಿ ಇದ್ದಾರೆ ಹಾಗಾಗಿ ಸರಕಾರ ಸಂಬಂಧಪಟ್ಟ ಅಧಿಕಾರಿಗಳು ಹಾನಿಗೋಳಗಾದ ರೈತರ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. 


ಸುದ್ದಿ ಓದಿ