ರಾಣೆಬೆನ್ನೂರ

ಬೆಳೆ ನಷ್ಟ-ಮನೆಗಳ ಕುಸಿತ ಸಂಕಷ್ಟದಲ್ಲಿ ರೈತರು

ಬೆಳೆ ನಷ್ಟ-ಮನೆಗಳ ಕುಸಿತ ಸಂಕಷ್ಟದಲ್ಲಿ ರೈತರು

ರಾಣೇಬೆನ್ನೂರು 22:  ಸತತವಾಗಿ ಬಿಟ್ಟು ಬಿಡದೆ ಸುರಿ ಯುತ್ತಿರುವ ಮಳೆಯಿಂದಾಗಿ ನಗರ ಹಾಗೂ ತಾಲೂಕಿನಾ ದ್ಯಂತ ಜನಜೀವನ ಅಸ್ತವ್ಯಸ್ಥ ಗೊಂಡ ಘಟನೆ ಶುಕ್ರವಾರ ದಂದು ಕಂಡು ಬಂದಿತು. ಕಳೆದ ನಾಲ್ಕು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದಾಗಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಇದರಿಂದ ರೈತರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.  

ತಾಲೂಕಿನ ಹಿರೇ ಬಿದರಿ, ಬೇಲೂರು, ಐರಣಿ, ಮುದೇನೂರ, ಹೊಳೆಆನ್ವೇರಿ, ಚಿಕ್ಕಅರಳಿಹಳ್ಳಿ, ಲಿಂಗದಹಳ್ಳಿ, ಚೌಡಯ್ಯದಾನಪುರ, ಚಂದಾ ಪುರ, ಹರನಗಿರಿ, ಚಿಕ್ಕಕುರವತ್ತಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರ ಫಸಲುಗಳು ಮಳೆ ಯಿಂದಾಗಿ ಹಾಳಾಗಿವೆ. ಈ ಬಾರೀ ಹೆಚ್ಚಾಗಿ ಹತ್ತಿ ಬೆಳೆದಿದ್ದ ರೈತರ ಮೊಗದಲ್ಲಿ ಹರ್ಷದ ವಾತಾವರಣ ಕಂಡು ಬಂದಿತ್ತು. ಆದರೆ ಮಳೆಯಿಂದ ಹತ್ತಿ ಬೆಳೆಯ ಹೂವು, ಮೋಪು ಉದುರಿ ವಿನಾಶದಂಚಿನಲ್ಲಿವೆ. ಇದರಿಂದಾಗಿ ರೈತರ ಪರಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.  

ರಾಣೇಬೆನ್ನೂರ ನಗರದ ಐತಿಹಾಸಿಕವುಳ್ಳ ದೊಡ್ಡಕೆರೆ ಸಂಪೂರ್ಣ ಭರ್ತಿ ಯಾಗಿ ಕೋಡಿ ಬಿದ್ದ ಪರಿ ಣಾಮ ಕೊಟ್ರೇಶ್ವರ ನಗರದಲ್ಲಿ ರುವ ಬಹುತೇಕ ಮನೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಹಾನಿಯಾಗಿವೆ. ಜಲಾವೃತಗೊಂಡ ಮನೆಗಳ ಸದಸ್ಯರು ಸಂಕಷ್ಟದಲ್ಲಿ ಸಿಲುಕಿ ದಂತಾಗಿದ್ದಾರೆ. ಶನೈಶ್ಚರ ಮಂದಿ ರಕ್ಕೆ ಹೋಗುವ ರಸ್ತೆಯು ಕಡಿತಗೊಂಡ ಪರಿಣಾಮ ಗ್ರಾಮೀಣ ಭಾಗಗಳಿಗೆ ತೆರಳುವ ವಾಹನಗಳ ಸಂಪರ್ಕ ಸ್ಥಗಿತ ಗೊಂಡಿವೆ. ಇನ್ನೂ ಕೆಲ ಗ್ರಾಮ ಗಳಲ್ಲಿ ಮನೆ ಕುಸಿತ, ಗೋಡೆಗ ಳು ಕುಸಿತಗೊಂಡ ಬಗ್ಗೆ ವರದಿ ಯಾಗಿದೆ. ಕೆಲ ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಪರದಾಡು ವಂತ ಸ್ಥಿತಿ ನಿರ್ಮಾಣವಾಗಿದೆ. 

ಐತಿಹಾಸಿಕ ದೊಡ್ಡ ಕೆರೆ ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣನವರ, ಎಸಿ ಉಳ್ಳಾಗಡ್ಡಿ, ತಹಶೀಲ್ದಾರ ಶಂಕರ್ ಜಿ.ಎಸ್ ಸೇರಿದಂತೆ ಭೇಟಿ ನೀಡಿ ಪರೀಶೀಲಿಸಿದರು. ನಂತರ ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಮಳೆಯಿಂದ ಹಾನಿ ಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರೀಶೀಲಿಸಿದರು. 


ಸುದ್ದಿ ಓದಿ