ಮೊಸಳೆ ಪ್ರತ್ಯಕ್ಷ:ಸಾರ್ವಜನಿಕರಲ್ಲಿ ಆತಂಕ
ಯರಗಟ್ಟಿ 18: ಸಮೀಪದ ಮುರಗೋಡ ಗ್ರಾಮದ ಬಸವರಾಜ ಮೊರಬನ್ನವರ ಜಮೀನಲ್ಲಿ ಇರುವ ಬಾವಿಯಲ್ಲಿ ಬುಧುವಾರ ಮೊಸಳೆ ಪ್ರತ್ಯಕ್ಷವಾಗಿದೆ.
ವರ್ಷಗಳ ಹಿಂದೆ ಬಾವಿಯಲ್ಲಿ ಸಣ್ಣದೊಂದು ಮೊಸಳೆಯ ಮರಿ ಇತ್ತು. ಗ್ರಾಮಸ್ಥರು ಅದನ್ನು ನೋಡಿ ಮೊಸಳೆಯ ಮರಿಯಿದೆ ಎಂದು ಸುಮ್ಮನಾಗಿದ್ದರು.
ಆದರೆ ಶುಕ್ರವಾರ ಮಧ್ಯಾಹ್ನ 02 ಗಂಟೆಗೆ ಗ್ರಾಮದ ರೈತರು ನೀರು ತರಲು ಆ ಬಾವಿಯ ಸಮೀಪ ಹೋದಾಗ ಬಾವಿಯಲ್ಲಿ ಮೊಸಳೆಯನ್ನು ಕಂಡು ರೈತರು, ಮರಿಯಾಗಿದ್ದ ಮೊಸಳೆ ದೊಡ್ಡದಾಗಿಬೆಳದಿದ್ದನ್ನು ಕಂಡು ಬೆಚ್ಚಿದ್ದಾರೆ.
ರೈತರು ಈ ಸುದ್ದಿಯನ್ನು ಗ್ರಾಮಸ್ಥರಿಗೆ ಮುಟ್ಟಿಸಿದಾಗ ಗ್ರಾಮಸ್ಥರೆಲ್ಲ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ವಲಯ ಅರಣ್ಯಅಧಿಕಾರಿ ಶಂಕರ ಅಂತರಗಟ್ಟಿ, ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಹಟ್ಟೇನ್ನವರ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಹನುಮಂತ ದಿಡಗನ್ನವರ, ಹನುಮಂತ ಆಡಿನ ತಮ್ಮ ಜತೆ ಮೀನುಗಾರರನ್ನು ಕರೆದುಕೊಂಡು ಸ್ಥಳಕ್ಕೆ ಬಂದು ಮೊಸಳೆಯನ್ನು ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಹಿಡಿದು ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಮೊಸಳೆ ಬಹಳ ದಿನಗಳಿಂದ ಹೊಂಡದಲ್ಲಿದ್ದರೂ ಯಾವುದೇ ಪ್ರಾಣ ಹಾನಿಯನ್ನು ಮಾಡಿಲ್ಲ. ಎಂದು ಕುರಕುಂದಿ ಗ್ರಾಮಸ್ಥರು ಹೇಳಿದ್ದಾರೆ.