ಕಾರವಾರ

ದಾಂಡೇಲಿಯ ಕಾಳಿನದಿಯಲ್ಲಿ ಮೊಸಳೆ: ಆತಂಕದಲ್ಲಿ ಜನರು

ದಾಂಡೇಲಿಯ ಕಾಳಿನದಿಯಲ್ಲಿ ಮೊಸಳೆ: ಆತಂಕದಲ್ಲಿ ಜನರು

ಲೋಕದರ್ಶನ ವರದಿ 

ದಾಂಡೇಲಿ 14 : ದಾಂಡೇಲಿಯ ಲೋಕೋಪಯೋಗಿ ಪ್ರವಾಸಿ ಮಂದಿರದ ಬಳಿ ಕಾಳಿನದಿಯ ದಂಡೆಯ ಪೊದೆಯಲ್ಲಿ ಮೊಸಳೆಯೊಂದು 40 ಮೊಟ್ಟೆಗಳನ್ನಿಟ್ಟು ಮರಿ ಮಾಡಿ ಪೋಶಿಸುತ್ತಿರುವ ಘಟನೆ ಜರುಗಿದೆ. ಇಲ್ಲಿಯ ಕಾಳಿನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು ಅವು ಈಗಾಗಲೆ ಐವರನ್ನು ಬಲಿ ಪಡೆದಿದೆ. ಹಲವರನ್ನು ಗಾಯಗೊಳಿಸಿದೆ. 

ಊರಗಲ್ಲಿಗಳಲ್ಲಿ ಕೂಡಾ ಮೊಸಳೆ ಆಗಾಗ ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕಿಡು ಮಾಡಿದೆ. ಒಂದು ಮೊಸಳೆ 40 ಮರಿಗಳನ್ನು ಮಾಡಿ ಮರಿಗಳನ್ನು ರಕ್ಷಣೆ ಮಾಡಿ ಕಾಯುತ್ತಿದೆ. ಇದೇ ರೀತಿ ಮೊಸಳೆಗಳು ಮೊಟ್ಟೆ ಇಟ್ಟು ಮರಿ ಮಾಡಿದರೆ ಕಾಳಿನದಿ ಎಲ್ಲ ಮೊಸಳೆಗಳಿಂದ ತುಂಬಿ ಜನವಸತಿ ಪ್ರದೇಶದತ್ತ ಸಂಚರಿಸತೊಡಗಿದೆ. ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ವೃದ್ದಿಸಲಿದೆ.  

ದಾಂಡೇಲಿಯ ಕಾಳಿನದಿಯಲ್ಲಿ ಅಳಿವಿನಂಚಿನಲ್ಲಿರುವ ಮಾರ್ಷ ಮಗ್ಗರ್ ಜಾತಿಯ ಮೊಸಳೆಗಳಿವೆ. ಅವುಗಳ ವಾಸಸ್ಥಾನವನ್ನು ಅಭಿವೃದ್ದಿಯ ಹೆಸರಿನಲ್ಲಿ ದಂಡೆಗುಂಟ ನಿರ್ಮಾಣ ಕೆಲಸಗಳನ್ನು ಮಾಡುತ್ತಿರುವದರಿಂದ ಮೊಸಳೆಗಳು ಕಾಳಿ ನದಿಯ ಜನವಸತಿ ಪ್ರದೇಶದ ದಂಡೆಗಳಲ್ಲಿ ಸುರಕ್ಷಿತ ಸ್ಥಳವನ್ನರಸಿ ಮೊಟ್ಟೆ ಇಟ್ಟು ಮರಿ ಮಾಡುತ್ತಿದೆ. ಬರುವ ದಿನಗಳಲ್ಲಿ ಮೊಸಳೆ ಮರಿಗಳ ಸಂಖ್ಯೆ ಎರಿದಲ್ಲಿ ಜನವಸತಿ ಪ್ರದೇಶಗಳಲ್ಲಿ ಮೊಸಳೆ ಮರಿಗಳ ಉಪದ್ರವ ತಪ್ಪಿದ್ದಲ್ಲ.  ಜನ ಆತಂಕದಲ್ಲೇ ಬದುಕಬೇಕಿದ್ದು ಸಂಭಧಿಸಿದ ಇಲಾಖೆ ಈ ಕುರಿತು ಚಿಂತನೆ ಮಾಡಬೇಕಿದೆ. 


ಸುದ್ದಿ ಓದಿ