ನಿಷ್ಕಾಮ ಸೇವೆ ಸತ್ಪಾತ್ರಕ್ಕೆ ಸಲ್ಲುತ್ತದೆ: ಡಾ. ಹನಸಿ
ಯರಗಟ್ಟಿ 16: ಮಾನವ ಜನ್ಮದ ಸಾರ್ಥಕತೆಯಾಗಲು ನಿರಪೇಕ್ಷೆಯಿಂದ ಸೇವೆ ಮಾಡಬೇಕು. ಪ್ರತಿಫಲ ಬರುವುದು ಬಿಡುವುದರ ಕುರಿತು ಚಿಂತಿಸಬಾರದು. ನಿಷ್ಕಾಮ ಕರ್ಮದಿಂದ ಮಾಡಿದ ಸೇವೆ ಸತ್ಪಾತ್ರಕ್ಕೆ ಸಲ್ಲುತ್ತದೆ ಎಂದು ಬಡವರ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ. ರವಿ ಹನಸಿ ಹೇಳಿದರು.
ಅವರು ಸಮೀಪದ ಮುನವಳ್ಳಿ ಪಟ್ಟಣದ ವಿ. ಪಿ. ಜೇವೂರ ಸ್ಮಾರಕ ಕಿವುಡು ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಸಮಾಜ ಸೇವಕ ಅಸ್ಲಂ ಕಿಲ್ಲೇದಾರ ಅವರ ಜನುಮದಿನದ ಪ್ರಯುಕ್ತ ಹಮ್ಮಿಕೊಂಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ವಿರೇಶ ಬ್ಯಾಹಟ್ಟಿ, ಪರಶುರಾಮ ಗಂಟಿ, ಸಂಗಮೇಶ ಬಟಕುರ್ಕಿ, ಶಶಾಂಕ ಪೂಜೇರ, ಬಸವರಾಜ ಅಬ್ಬಾರ, ವೀರೂ ಮುರನಾಳ, ಪ್ರವೀಣ ಕಾಮಣ್ಣವರ, ಶಿವು ಕಾಟಿ, ವೀರೂ ಕಳಸಣ್ಣವರ, ಮಂಜುನಾಥ ಮಾವಿನಕಟ್ಟಿ, ವೀರಣ್ಣ ಮುದಗಲ್ಲ, ಗೋಪಿ ಪಟಗುಂದಿ ಸೇರಿದಂತೆ ಇತರರ ಇದ್ದರು.