ತಾಳಿಕೋಟಿ

ಬಿರುಕುಬಿಟ್ಟ ಅಂಗನವಾಡಿ ಕೇಂದ್ರದ ಮೇಲ್ಚಾವಣಿ

ಬಿರುಕುಬಿಟ್ಟ ಅಂಗನವಾಡಿ ಕೇಂದ್ರದ ಮೇಲ್ಚಾವಣಿ

ತಾಳಿಕೋಟೆ 11: ತಾಲೂಕಿನ ಅಸ್ಕಿ  ಗ್ರಾಮದ ಒಂದನೇ ವಾಡರ್ಿನಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಬಿರುಕು ಬಿಟ್ಟ ಕಾರಣ ಒಂದು ವರ್ಷದಿಂದಲೂ ಸ್ವಲ್ಪ ಮಳೆ ಬಂದರೆ ಸಾಕು ಈ ಕೇಂದ್ರ ಸ್ಥಿತಿ ಹೇಳತೀರದು ಈ ಅವಸ್ಥೆಯ ಕುರಿತು ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. 

ಈ ಅಂಗನವಾಡಿ ಕೇಂದ್ರದ ಕೊಠಡಿಯ ಮೇಲ್ಚಾವಣಿ ಎಲ್ಲೆಂದರಲ್ಲಿ ಬಿರುಕು ಬಿಟ್ಟಿರುವ ದೃಶ್ಯ ಕಾಣಬಹುದು ಮತ್ತೊಂದೆಡೆ ನಮ್ಮ ಅಂಗನವಾಡಿಯ ದುಸ್ಥಿತಿ ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಊರಿನ ಗ್ರಾಮಸ್ಥರು. ಈ ಕೇಂದ್ರಕ್ಕೆ ಸುಮಾರು 30 ವರ್ಷಗಳ ಇತಿಹಾಸ ಇದೆ. ಕಳೆದ ವರ್ಷದಿಂದಲೂ  ಅಲ್ಪ ಸ್ವಲ್ಪ ಮಳೆ ಬಂದರೆ ಸಾಕು ಇಡೀ ಕೇಂದ್ರವು ಮಳೆಗೆ ಸೋರುವುದು ಮೇಲ್ಛಾವಣಿಯ ಕಾಂಕ್ರೀಟ್ ಪದರಗಳು ಉದುರಿ ಕೆಳಗೆ ಬರುತ್ತಿವೆ ಇನ್ನು ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. 

ಮಕ್ಕಳಿಗೆ ವಿತರಣೆ ಮಾಡುವ ಪೋಸ್ಟಿಕ್ ಆಹಾರ ಸಂಗ್ರಹಿಸಿದ ಚೀಲಗಳು ಮಳೆ ನೀರಿಗೆ ನೆನೆಯುವ  ಸ್ಥಿತಿ ಉಂಟಾಗಿದೆ. ಈ ಕೇಂದ್ರಕ್ಕೆ ಸುಮಾರು 35ರಿಂದ 40 ಕ್ಕೂ ಅಧಿಕ ಮಕ್ಕಳು ದಿನಂಪ್ರತಿ ಬರುತ್ತಾರೆ. ಆದ್ರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡದೆ ಇರುವುದು ದುರಂತ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಈ ಸ್ಥಿತಿಯನ್ನು ಕಂಡು ಗ್ರಾಮಸ್ಥರು ಸೇರಿ  ಪರ್ಯಾಯ ವ್ಯವಸ್ಥೆಯಾಗಿ ಬೇರೆ ಕಡೆ ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಅನುವು ಮಾಡಿಸಿದ್ದಾರೆ ಈ ಮೂಲ ಕೊಠಡಿಯ ದುರಸ್ತಿ ಆಗುವವರಿಗೆ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಬೇರೆ ಕಡೆ ಕೇಂದ್ರ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು. ಈ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತಾಲೂಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳಿಗೆ ಆಗುವ ಅವರ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂಬುದು ಗ್ರಾಮದ ಜನರ ಆಶಯವಾಗಿದೆ 

ಸುದ್ದಿ ಓದಿ