ಕಾರವಾರದಲ್ಲಿ ಕೋವಿಡ್ ನಿಯಮ ಪಾಲನೆ : ಅಲ್ಲಲ್ಲಿ ಮುಚ್ಚಿದ ಶಾಪ್
ಕಾರವಾರ 23: ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕೆಲ ಅಂಗಡಿ ಮುಂಗ್ಗಟ್ಟು ಮುಚ್ಚಿದ್ದವು. ಹೋಟೆಲ್ಗಳು ಪಾರ್ಸೆಲ್ ಅಷ್ಟೇ ಮಾಡಿದವು. ಸಾರ್ವಜನಿಕರು ಬಹುತೇಕ ಮಾಸ್ಕ ಧರಿಸಿ ಓಡಾಡಿದರು. ಆದರೆ ತರಾಕರಿ, ಹಣ್ಣು, ರೇಶನ್ ಅಂಗಡಿಗಳು ತೆರೆದಿದ್ದವು. ಅಂಗಡಿಗಳಲ್ಲಿ ವ್ಯಾಪಾರ ಎಂದಿನಂತೆ ಇತ್ತು, ಜನ ಬೇಕಾದ ಆಹಾರ ಸಾಮಾಗ್ರಿ ಖರೀದಿಸಿದರು. ಮಾಸ್ಕ ಧಾರಣೆ ಎಲ್ಲೆಲ್ಲೂ ಕಂಡು ಬಂತು. ಮೊಬೈಲ್, ಟಿವಿ ಶಾಪ್, ಆಲಂಕಾರಿಕ ಸಾಮಾಗ್ರಿ ವ್ಯಾಪಾರದ ಮಳಿಗೆಗಳು, ಫ್ಯಾಶನ್ ಸ್ಟೋರ್ಸ, ಬಟ್ಟೆ ಅಂಗಡಿಗಳು, ಶರಬತ್ತ ಮಾರುವ ಬೀದಿ ಬದಿ ಅಂಗಡಿ ಬಂದ್ ಆಗಿದ್ದವು. ಆದರೆ ಕೆಲವೆಡೆ ಬಟ್ಟೆ ಅಂಗಡಿ ತೆರೆದಿದ್ದವು. ಬ್ಯಾಂಕ್ಗಳು ಕಾರ್ಯ ನಿರ್ವಹಿಸಿದವು. ಎಳನೀರು ವ್ಯಾಪಾರವಿತ್ತು. ಶನಿವಾರ ಮತ್ತು ರವಿವಾರ ಸೆಮಿ ಲಾಕ್ ಡೌನ್ ಇರಲಿದ್ದು, ಜನರು ಕರ್್ಯೂ ನಿಯಮ ಪಾಲಿಸಬೇಕೆಂದು ಅಧಿಕಾರಿಗಳು ವಿನಂತಿಸಿದ್ದಾರೆ. ಮಾಸ್ಕಧಾರಣೆ ಹೆಚ್ಚಿರುವ ಕಾರಣ ದಂಡ ವಸೂಲಿಗೆ ಬ್ರೇಕ್ ಬಿದ್ದಿದೆ.