ರಾಣೆಬೆನ್ನೂರ

‘ಸೋಂಕಿತರು ಗುಣಮುಖರಾಗಿ ಹೊರಗೆ ಬಾರದೆ ಇರುವುದು ವಿಷಾದನೀಯ’

‘ಸೋಂಕಿತರು ಗುಣಮುಖರಾಗಿ ಹೊರಗೆ ಬಾರದೆ ಇರುವುದು ವಿಷಾದನೀಯ’

ರಾಣಿಬೆನ್ನೂರ 17:  ಕೊರೊನಾ ಸೋಂಕಿನ ಚಿಕಿತ್ಸೆ ಪಡೆಯಲು ಆಸ್ಪತ್ರೆ ಸೇರಿದ ಸೋಂಕಿತರು ಗುಣಮುಖರಾಗಿ ಹೊರಗೆ ಬಾರದೆ ಅವರ ಹೆಣಗಳು ಬರುತ್ತಿವೆ. ಆಸ್ಪತ್ರೆಯ ಒಳಗೆ ಹೋಗುವ ಮುನ್ನ ನಡೆದು ಕೊಂಡು ಸಂಬಂಧಿಕರ ಜೊತೆ ಮಾತನಾಡುತ್ತಾ ಸಂಬಂಧಿಕರಿಗೆ ಧೈರ್ಯ ಹೇಳುತ್ತಲೆ ಒಳ ಹೋದ ಸೊಂಕಿತರು ಹೆಣವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ರೈತ ಮುಖಂಡ ರವಿಂದ್ರಗೌಡ ಪಾಟೀಲ ಹೇಳಿದರು. 

ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಐದು ಆರು ದಿನಗಳಿಂದ ನನ್ನ ಅನೇಕ ಸ್ನೇಹಿತರನ್ನು ಬಂಧುಗಳನ್ನು ಈ ರೀತಿಯಾಗಿ ಕಳೆದು ಕೊಂಡಿದ್ದೇನೆ. ಚಿಕಿತ್ಸೆ ಪಡೆದು ಹೊರಗೆ ಬಂದರೆ ಸಾಕೆಂದು ಅವರವರ ಕುಟುಂಬದವರು ಸಾಲ ಸೂಲ ಮಾಡಿ ವಿಫರಿತ ಹಣ ವೆಚ್ಚ ಮಾಡಿ ಆಸ್ಪತ್ರೆಗೆ ಭರಿಸಿದರು ಸೊಂಕಿತರು ಗುಣಮುಖರಾಗಿ ಹೋರಗೆ ಬಾರದೆ ಹೆಣವಾಗಿ ಬರುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು. 

ತಾಲೂಕಿನ ಮುಷ್ಟೂರು, ತೆರದಹಳ್ಳಿ, ಮಣಕೂರು, ಕರ್ಜರಿ, ಊದಗಟ್ಟಿ, ಚಳಗೇರಿ, ಕವಲೆತ್ತು, ಅಂತರವಳ್ಳಿ, ರಾಣಿಬೆನ್ನೂರು ನಗರವು ಸೇರಿದಂತೆ ಹಲವು ಭಾಗಗಳ ಬಂಧುಗಳನ್ನು ಸ್ನೇಹಿತರನ್ನು ನಾನು ಇದೇ ಒಂದು ವಾರದಲ್ಲಿ ಕಳೆದು ಕೊಂಡಿದ್ದೇನೆ. ಕೆಲವು ಸೊಂಕಿತರು ಮನೆಯಲ್ಲಿದ್ದು ಮನೆಯ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆ ಸೇರಿದವರು ಹೆಣವಾಗಿ ಬರುತ್ತಿದ್ದಾರೆ ಎಂದು ದೂರಿದರು. 

ಇದಕ್ಕೆ ಕಾರಣ ಆಸ್ಪತ್ರೆಯವರ ಧನದ ದಾಹ, ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದು ಐದು ಸೊಂಕಿತರಿಗೆ ಕೊಡಲು ಸಾಧ್ಯವಿದ್ದ ಆಕ್ಸಿಜನ್‌ನ್ನು ಹತ್ತು ಜನ ಸೊಂಕಿತರಿಗೆ ಕಡಿಮೆ ಪ್ರಮಾಣದಲ್ಲಿ  ನೀಡಲು  ಹೋಗಿ ಪ್ರಾಣ ತೆಗೆಯುತ್ತಿದ್ದಾರೆ. ಇದು ತನಿಖೆಯಾಗಬೇಕು. ನ್ಯಾಯ ಸಿಗಬೇಕು. ಈ ಕ್ರಮಕ್ಕೆ ಇಂದೆ ಕಡಿವಾಣ  ಹಾಕಬೇಕು. ಇಲ್ಲದಿದ್ದರೆ ಸಾವನ್ನಪ್ಪಿದ ಸೊಂಕಿತರ ಕುಟುಂಬಸ್ಥರೊಂದಿಗೆ ರಸ್ತೆ ತಡೆದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು. 


ಸುದ್ದಿ ಓದಿ