ಕಾರವಾರ

ಜೂನ್21ರಂದು ಕೋವಿಡ್ ಲಸಿಕೆಯ ಮಹಾ ಮೇಳ

ಜೂನ್21ರಂದು ಕೋವಿಡ್ ಲಸಿಕೆಯ ಮಹಾ ಮೇಳ

ಕಾರವಾರ 19: ನಗರ ವ್ಯಾಪ್ತಿಯಲ್ಲಿ ಬರುವ18 ವರ್ಷಮೇಲ್ಪಟ ಆದ್ಯತಾ ವಲಯದ ವ್ಯಾಪಾರಸ್ಥರು ಅಂಗಡಿಕಾರರಿಗೆ ಜೂನ್21ರಂದು ಜಿಲ್ಲಾರಂಗಮಂದಿರ ಹಾಗೂ ನಂದಂಗದ್ದದಅಂಬೇಡ್ಕರ್ ಭವನದಲ್ಲಿ ಕೋವಿಡ್ ಲಸಿಕೆಯ ಮಹಾ ಮೇಳವನ್ನು  ಆಯೋಜಿಸಲಾಗಿದೆ. 

ಮೀನು ಮಾರಾಟಗಾರರು, ಬೀದಿ ಬದಿ ವ್ಯಾಪಾರಸ್ಥರು, ಕ್ಷೌರಿಕರು, ಕಿರಾಣಿ, ಹಾಲು, ಬೇಕರಿ ವ್ಯಾಪಾರಸ್ಥರು, ಕಟ್ಟಡ, ಕೂಲಿ ಕಾರ್ಮಿಕರು ಇತ್ಯಾದಿ ಆಧ್ಯತಾವಲಯದ ವ್ಯಾಪಾರಸ್ಥರು ಈ ಲಸಿಕಾ ಮೇಳದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಪೌರಾಯುಕ್ತ ಆರ್‌.  ಪಿ.  ನಾಯ್ಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ