ಕಾರವಾರ

ಆರೋಗ್ಯ ಕೇಂದ್ರಗಳಲ್ಲಿ ಕೊವೀಡ್ ಲಸಿಕಾ ಮೇಳ

ಆರೋಗ್ಯ ಕೇಂದ್ರಗಳಲ್ಲಿ  ಕೊವೀಡ್ ಲಸಿಕಾ ಮೇಳ

ಬನವಾಸಿ 21: ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುಡ್ನಾಪೂರ ಉಪ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕೊವೀಡ್ ಲಸಿಕಾ ಮೇಳ ಜರುಗಿತು.   

ಬೆಳಿಗ್ಗೆ 10ಗಂಟೆಗೆ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬನವಾಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸಿ ಮುಂಜಾನೆ 8 ಗಂಟೆಯಿಂದ ಕೋವಿಡ್ ಮಾರ್ಗಸೂಚಿಯಂತೆ ಸರತಿ ಸಾಲಿನಲ್ಲಿ ನಿಂತು ಕೋವಿಡ್ ಲಸಿಕೆಯನ್ನು ಪಡೆದುಕೊಂಡರು. 18ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಕೋವಿಡ್ ಲಸಿಕೆ ನೀಡುತ್ತಿರುವುದರಿಂದ ಯುವಜನತೆ ಲಸಿಕಾ ಮೇಳಕ್ಕೆ ಉತ್ಸಹದಿಂದ ಆಗಮಿಸಿ ಲಸಿಕೆ ಹಾಕಿಕೊಂಡರು. 45ವರ್ಷ ಮೇಲ್ಪಟ್ಟವರು ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆದುಕೊಂಡರು.  

ಸಾರ್ವಜನಿಕರ ಸಹಕಾರದಿಂದ ಲಸಿಕಾ ಮೇಳ ಯಶಸ್ವಿಯಾಗಿ ನಡೆಯುತ್ತಿದೆ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 400 ಜನರಿಗೆ ಮತ್ತು ಗುಡ್ನಾಪೂರ ಉಪ ಆರೋಗ್ಯ ಕೇಂದ್ರದಲ್ಲಿ 200 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಜಯಶ್ರೀ ಹೆಗಡೆ ಹೇಳಿದರು. 

ಕಾರ್ಯಕ್ರಮದಲ್ಲಿ  ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಇದ್ದರು.  

ಸುದ್ದಿ ಓದಿ