ಕಾರವಾರ

ಕೋವಿಡ್ ಅಲೆಯ ಜಾಗೃತ ಜಾಥಾಕ್ಕೆ ಚಾಲನೆ

ಕೋವಿಡ್ ಅಲೆಯ ಜಾಗೃತ ಜಾಥಾಕ್ಕೆ ಚಾಲನೆ

ಕಾರವಾರ ೨೨: ಕೋವಿಡ್-19 ಎರಡನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ 22 ರಿಂದ 24 ರವರೆಗೆ ಹಮ್ಮಿಕೊಂಡಿರುವ ಜಾಗೃತಿ  ಜಾಥಾಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.  ಜಾಥಾ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಟು,  ಸುಭಾಷ ಸರ್ಕಲ್-ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ-ಗಣಪತಿ ದೇವಸ್ಥಾನ- ಸವಿತಾ ಹೋಟೆಲ್ ಸರ್ಕಲ್-ಕಾಜುಬಾಗ ರಸ್ತೆ-ಒಲ್ಡ್ ಸಿವಿಲ್ ಆಸ್ಪತ್ರೆ ರಸ್ತೆ ಕ್ರಾಸ್ ತಹಶೀಲ್ದಾರ್ ಕಚೇರಿಯ ವರೆಗೆ ಸಂಚರಿಸಿ ಜನರಲ್ಲಿ  ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ ದರಿಸುವ ಕುರಿತು ಜಾಗೃತಿ ಮೂಡಿಸಿತು. ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಾರವಾರ ಸಹಾಯಕ ಕಮೀಷನರ ವಿದ್ಯಾಶ್ರೀ ಚಂದರಗಿಯವರ  ಅಧ್ಯಕ್ಷತೆಯಲ್ಲಿ ಜನ ಜಾಗೃತಿ   ಜಾಥಾ  ಹಮ್ಮಿಕೊಳ್ಳಲಾಗಿರುತ್ತದೆ.  ಈ ಜಾಥಾ ಕಾರ್ಯಕ್ರಮದಲ್ಲಿ ಎಲ್ಲಾ ತಾಲೂಕ ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲೂಕ ಆರೋಗ್ಯಧಿಕಾರಿ  ಭಾಗವಹಿಸಿದ್ದರು.  ಜಿಲ್ಲಾ ನ್ಯಾಯಾಲಯ ಆವರಣ, ಕೆಎಸ್‍ಆಆರ್‍ಟಿಸಿ ಬಸ್ ನಿಲ್ದಾಣ, ಗಣಪತಿ ದೇವಸ್ಥಾನ ಸ್ಥಳಗಳಲ್ಲಿ ಕೋವಿಡ್-19 ಜಾಗೃತಿ ಕೇಂದ್ರ ತೆರೆದು ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿತ್ತು.

ಸುದ್ದಿ ಓದಿ