ಕಾರವಾರ

ಕೊವಿಡ್ : 3 ನೇ ಅಲೆಗೆ ಮೊದಲು ಕ್ರಮ ಕೈಗೊಳ್ಳಿ : ಸಿದ್ಧರಾಮಯ್ಯ

ಕೊವಿಡ್ : 3 ನೇ ಅಲೆಗೆ ಮೊದಲು ಕ್ರಮ ಕೈಗೊಳ್ಳಿ : ಸಿದ್ಧರಾಮಯ್ಯ

 ಕಾರವಾರ : ಕೊವಿಡ್ 3 ನೇ ಅಲೆ ತಡೆಯುವ ನಿಟ್ಟಿನಲ್ಲಿ ಮೊದಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಎರಡು ಅಲೆಗಳಲ್ಲಿ ಜನರ ಸಾವು ಕಂಡಾಗಿದೆ. ಆಕ್ಸಿಜನ್ ಕೊರತೆಯನ್ನು ಕಂಡಿದ್ದೇವೆ. ಮುಂದೆ ಆಗಾಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದು ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದರು. 

ಕಾರವಾರ ಪ್ರವಾಸಿ ಮಂದಿರದಲ್ಲಿ ಸೋಮವಾರ  ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕೋವಿಡ್ ನಿಂದ ಜನ ಸಾಮಾನ್ಯರು ಕಷ್ಟ ಅನುಭವಿಸಿದ್ದಾರೆ. ಹಾಗಾಗಿ ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರವಹಿಸಬೇಕು. ಕೋವಿಡ್ ಎರಡೂ ಡೋಜ್ ಲಸಿಕೆ ಪಡೆಯದವರನ್ನು ರಾಜ್ಯಕ್ಕೆ ಬರುವುದನ್ನು ತಡೆಯಬೇಕು. ಸಾಮಾನ್ಯವಾಗಿ ಕೇರಳದ ಮೂಲಕ ಮಂಗಳೂರು, ಕೊಡಗು ಜಿಲ್ಲೆಗಳಿಗೆ ಬರುತ್ತಾರೆ. ಮಹಾರಾಷ್ಟ್ರಕ್ಕೆ ಹತ್ತಿಕೊಂಡ ರಾಜ್ಯದ ಜಿಲ್ಲೆಗಳಲ್ಲಿ ಸಹ ಕಟ್ಟೆಚ್ಚರ ವಹಿಸಬೇಕು ಎಂದು ಅವರು ಹೇಳಿದರು. 

 ಸಿಎಂ ಬೊಮ್ಮಾಯಿ ಪದೇ ಪದೇ ದೆಹಲಿಗೆ ಹೋಗುವುದು ಸರಿಯಲ್ಲ. ಕೋವಿಡ್ ಬಗ್ಗೆ ಮೊದಲು ಹೆಚ್ಚಿನ ಆದ್ಯತೆ ನೀಡಬೇಕು.  ಅವರ ಪಕ್ಷದ ದೆಹಲಿಯ ನಾಯಕರು ಸಹ ಮಂತ್ರಿಮಂಡಳ ರಚನೆಗೆ ಒಂದು ನಿರ್ಧಾರ ಮಾಡಿ ಕಳಿಸಬೇಕು . ಪದೇ ಪದೇ ದೆಹಲಿಗೆ ಕರೆಯಿಸಿಕೊಳ್ಳುವುದು ಸರಿಯಲ್ಲ ಎಂದರು. ರಾಜ್ಯದ ಬಿಜೆಪಿ ಶಾಸಕರು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಅವರಿಗೆ ಮಂತ್ರಿಯಾಗುವ ತರಾತುರಿ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರಿಗೆ ಬೇಡವಾಗಿದೆ ಎಂದು ಟೀಕಿಸಿದರು.  

ರೇಣುಕಾಚಾರ್ಯ ತಮ್ಮ ಬಗ್ಗೆ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ ಮೊರೆ ಹೋಗಿದ್ದರಲ್ಲಾ ಎಂಬ ಪ್ರಶ್ನೆಗೆ  , ಏನಾದ್ರೂ ಸೆಕ್ಸ ಸ್ಕ್ಯಾಂಡಲ್, ಭ್ರಷ್ಟಾಚಾರ ಮಾಡಿರಬೇಕು. ಇಲ್ಲದಿದ್ದರೆ ಯಾಕೆ ಕೋರ್ಟಗೆ ಹೋಗುತ್ತಿದ್ದರು? ಬಿಜೆಪಿ ಸಂಸ್ಕೃತಿ ಪಕ್ಷ ಅಂಥ ಹೇಳಿಕೊಳ್ತದೆ. ಆದರೆ ಸಂಸ್ಕೃತಿ ಹೀನ ಪಕ್ಷ ಎಂದು ಸಿದ್ಧರಾಮಯ್ಯ ಟೀಕಿಸಿದರು.  

ಜೆಡಿಎಸ್ ಸೆಕ್ಯುಲರಿಜಂಗೆ ತರ​‍್ಣ: 

ದೇವೇಗೌಡರು ಸಿಎಂ ಬೊಮ್ಮಾಯಿ ಅವರ ಬಗ್ಗೆ ಸಾಫ್ಟ್‌ ಕಾರ್ನರ್ ತಾಳಿದ್ದಾರಲ್ಲ ಎಂಬ ಪ್ರಶ್ನೆಗೆ ನಾನು ಆ ಬಗ್ಗೆ ಏನೂ ಹೇಳಲ್ಲ. ಆದರೆ ಜೆಡಿಎಸ್ ಸೆಕ್ಯುಲರ್ ಪಕ್ಷವಾಗಿ ಉಳಿದಿಲ್ಲ. ಸೆಕ್ಯುಲರಿಜಂಗೆ ಎಂದೋ  ತರ​‍್ಣ ನೀಡಲಾಗಿದೆ ಎಂದರು.  ನಾವೆಲ್ಲಾ ಮೂಲ  ಜೆಡಿಎಸ್ ನಿಂದ ಬಂದವರೇ. ಹಾಗಂತ ಈಗ ನಾವು ಜೆಡಿಎಸ್ ನವರೆಂದು ಹೇಳಲಿಕ್ಕಾಗದು.  

ಸಿಎಂ ಭ್ರಷ್ಟ ಎನ್ನಲಾರೆ : 

ಯಡಿಯೂರ​‍್ಪ ಅವರನ್ನು ಭ್ರಷ್ಟಾಚಾರದ ಕಾರಣದಿಂದ ಬದಲಿಸಿದ್ದು. ವಯಸ್ಸಿನ ಕಾರಣದಿಂದ ಅಲ್ಲ. ಯಡಿಯೂರ​‍್ಪಗೆ 75 ತುಂಬಿ ಬಹಳ ದಿನವಾಗಿತ್ತು. ಈಗ ಬೊಮ್ಮಾಯಿ ಮುಖ್ಯಮಂತ್ರಿ. ಅವರ ನಡೆಯನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದರು.  

ಸರ್ಕಾರದ ಮೇಲೆ ಒತ್ತಡ ಹೇರುವೆ : 

ಪ್ರವಾಹ ಪೀಡಿತ ಜನರ ಅಳಲು ಆಲಿಸಿದ ಸಿದ್ದರಾಮಯ್ಯ ಮತ್ತೆ ಮಾಧ್ಯಮಗಳ ಜೊತೆ ಮಾತನಾಡಿ ಸರ್ಕಾರದ ಮೇಲೆ ನೆರೆ ಸಂತ್ರಸ್ತರ ಕಷ್ಟ ಅಸಹನೀಯವಾಗಿದೆ. ಸೂಕ್ತ ಪರಿಹಾರ ಹಾಗೂ ಪಟ್ಟ ಇಲ್ಲದವರಿಗೂ ಮನೆ ಪರಿಹಾರ ಕೊಡಿಸಲು ಸರ್ಕಾರದ ಬಳಿ ದನಿ ಎತ್ತುವೆ ಎಂದರು. ಕಾಳಿ ನದಿ ದಂಡೆಯ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಸಿಗಬೇಕಿದೆ. ಇದಕ್ಕಾಗಿ ಸದನದ ಒಳಗೆ, ಹೊರಗೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು. ಆರ್‌.ವಿ.ದೇಶಪಾಂಡೆ ,ಮಾಜಿ ಶಾಸಕ ಸೈಲ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ , ಮಹಿಳಾ ಕಾಂಗ್ರೆಸ್ ಸುಶ್ಮಾ ರೆಡ್ಡಿ , ಸುಮಾ, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ