ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ : ಶಾಸಕ ಬಸವರಾಜ
ಬ್ಯಾಡಗಿ 04: ‘ಗ್ರಾಮೀಣ ಭಾಗದಲ್ಲಿ ಸಿ.ಸಿ ರಸ್ತೆ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮತ್ತು ಸ್ಮಾರ್ಟ್ ಕ್ಲಾಸ್ ಕೊಠಡಿ ವಿತರಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕ್ಷೇತ್ರದ ಸಂಪೂರ್ಣ ಅಭಿವೃದ್ದಿಯೇ ನನ್ನ ಬದ್ಧತೆ. ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ತಾಲ್ಲೂಕಿನ ಕದನಮನಹಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನ ಅಡಿಯಲ್ಲಿ ದಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.‘ಗ್ರಾಮದ ವಿಕಾಸಕ್ಕಾಗಿ 31 ಲಕ್ಷ ಮೊತ್ತದ ಕಾಮಗಾರಿ ಬಂದಿದೆ. ಆಡಳಿತ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿ ಸಹಕಾರದಿಂದಾಗಿ ಹಲವಾರು ಉತ್ತಮ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಪ್ರಗತಿ ಸಾಧಿಸಬೇಕು. ಗ್ರಾಮದಲ್ಲಿ ಎಸ್ ಸಿ ಅನುದಾನ ಅಡಿಯಲ್ಲಿ ಸಿ.ಸಿ. ರಸ್ತೆ 15 ಲಕ್ಷ ಮತ್ತು ಶಾಸಕರ ಅನುದಾನದಲ್ಲಿ ದೇವಸ್ಥಾನದ ಕಂಪೌಂಡ್ ನಿರ್ಮಾಣಕ್ಕೆ ದೇವಸ್ಥಾನದ ಜಿರ್ಣೊದ್ದಾರಕ್ಕೆ ಮತ್ತು ಮಲೆನಾಡಿನ ಅಭಿವೃದ್ದಿ ಯೋಜನೆಯಿಂದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ’ ಎಂದರು.
ಇದೇ ವೇಳೆ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ ಮಾತನಾಡಿಕದನಮನಹಳ್ಳಿ ಗ್ರಾಮದ ಶ್ರೀ ಗಳು ಆಶಿರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ ಮಕ್ಕಳು ಶಾಲೆಗೆ ಹೋದರೆ ಮಾತ್ರ ಸಾಲದು ಶಾಲೆ ಪಾಲಕರು ಮಕ್ಕಳ ಸಾವು ಬಾವಗಳನ್ನು ನೋಡಬೇಕು ಶಾಲೆಗೆ ಹೋಗುವ ಮಕ್ಕಳಿಗೆ ಮೊಬೈಲ್ ಕೋಡಬೇಡ ಎಂದು ತಾಯಂದಿರಿಗೆ ಕಿವಿ ಮಾತು ಹೇಳಿದರು.ಇತ್ತಿಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಹಾಳಾಗಿ ಹೋಗುತ್ತಿವೆ.ದೇಶದ ಬಗ್ಗೆ ನಿಮ್ಮ ಪ್ರಧಾನಿಗಳು ಹಾಗು ರಾಜಕೀಯ ನಾಯಕರು ಶ್ರಮ ಪಡುತ್ತಿದ್ದಾರೆ ನಮ್ಮ ದೇಶವನ್ನು ಕಾಪಾಡುವ ಕೆಲಸ ಸೈನಿಕರು ಮಾಡುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಪಶುಪತಿ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು.ಸಿದ್ದ ನಂದಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಮಾಜಿ ಶಾಸಕ ಸುರೇಶಗೌಡ ಪಾಟೀಲ.ದಾನಪ್ಪ ಚೂರಿ.ಪೋಲಿಸಗೌಡ ಪಾಟೀಲ.ಬಸವರಾಜ ಸವಣೂರ.ನಾಗರಾಜ ಆನ್ವೇರಿ.ಚನ್ನಬಸಪ್ಪ ಹುಲ್ಲತ್ತಿ ಎಮ್ ಎಮ್ ಹೀರೆಮಠ.ಸತೀಶ ಪಾಟೀಲ.ಶಂಭನಗೌಡ ಪಾಟೀಲ.ನಾಗರಾಜ ಗುತ್ತಲ.ಪ್ರವೀಣ ಪೂಜಾರ.ಗುತ್ತಿಗೆದಾರರಾದ ರಾಮಚಂದ್ರ್ಪ ಅಂಗಡಿ.ವೀರಭದ್ರ್ಪ ಅಂಗಡಿ.ವೀರೆಷ ಅಂಗಡಿ.ನೀಲನಗೌಡ್ರ ಪಾಟೀಲ ಶಂಭು ಹೀರೆಮಠ.ನಾಗರಾಜ ಅಂಗಡಿ.ಹಾಗೂ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.