ಅಥಣಿ

ಖಾಸಗಿ ಶಿಕ್ಷಣ ಸಂಸ್ಥೆಗಳ ಕದ ಮುಚ್ಚಿಸುತ್ತಿರುವ ಕೊರೊನಾ !

ಖಾಸಗಿ ಶಿಕ್ಷಣ ಸಂಸ್ಥೆಗಳ ಕದ ಮುಚ್ಚಿಸುತ್ತಿರುವ ಕೊರೊನಾ !
ಕರೊನಾ ಪರಿಣಾಮ ಕಳೇದ 2020 ಮಾರ್ಚ ತಿಂಗಳಿನಿಂದ ಬೀಗ ಮುಚ್ಚಿಕೊಂಡಿರುವ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿರುವ ಬಸವಶ್ರೀ

ಅಥಣಿ 28: ಕರೊನಾ ಹೊಡೆತದಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಶ್ವತ ಬಾಗಿಲು ಮುಚ್ಚುವ ಬೀತಿಯಲ್ಲಿವೆ. ಕರೊನಾ 1 ಹಾಗೂ 2 ನೇ ಅಲೆಯಿಂದ ಕಂಗಾಲಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಕ್ಷರಶ ನಲುಗಿ ಹೋಗುತ್ತಿವೆ. ಸರ್ಕಾರದ ಯಾವುದೇ ಬೆಂಬಲವೂ ದೊರೆಯದೇ ಇತ್ತ ಪಾಲಕರ ಸಹಕಾರವು ಇಲ್ಲದೇ ಕಡಿಮೆ ಶಾಲಾ ಶುಲ್ಕ ತೆಗೆದುಕೊಳ್ಳುವ ಬಜೆಟ್ ಶಾಲೆಗಳ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರಗಳಿಗೂ ಅಲ್ಪ ಸ್ವಲ್ಪ ಪ್ಯಾಕೇಜ ನೀಡಿದೆ ಸಮಾದಾನ ಪಡಿಸಿದೆ ಆದರೇ ಶೈಕ್ಷಣಿಕ ಕ್ಷೇತ್ರಕ್ಕೆ ಅನ್ಯಾಯ ಮಾಡುತ್ತದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿವೆ.  

ಸರ್ಕಾರ ಶೈಕ್ಷಣಿಕವಾಗಿ ಮಾಡುವ ಅರ್ಧ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿ ಸರ್ಕಾರದ ಭಾರ ಕಡಿಮೆ ಮಾಡಿವೆ. ಆದರೆ ಸರ್ಕಾರದ ಮಲತಾಯಿ ಧೋರಣೆ ಮಾತ್ರ ನಿರಂತರ ಮುಂದುವರೆದಿದೆ. ಇತ್ತ ಪಾಲಕರಿಂದ ಸರಿಯಾಗಿ ಶಾಲಾ ಶುಲ್ಕ ಬರದೇ ಅತ್ತ ಸರ್ಕಾರದ ಯಾವುದೇ ಪ್ರೋತ್ಸಹ ಧನ ದೊರೆಯದೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಹೇಳತಿರತದ ಕಷ್ಟ ನಷ್ಟ ಅನುಭವಿಸುತ್ತಿವೆ. ಸೇವೆಸಲ್ಲಿಸುವ ಶಿಕ್ಷಕರಿಗೆ ಸಂಭಳ, ವಾಹನಗಳ ಕಂತು, ಇನ್ಸೂರನ್ಸ್‌, ಕಟ್ಟಡಗಳಿಗೆ ಪಡೆದ ಬ್ಯಾಂಕ ಸಾಲ ಹೇಗೆ ತಿರಸಬೇಕೆಂಬ ಗೊಂದಲದಲ್ಲಿ ಆಡಳಿತ ಮಂಡಳಿಗಳಿವೆ.  ಪದವಿಧರ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಂ.ಎಲ್‌.ಸಿ ಗಳಿಗಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯ ಅರ್ಥವಾಗಿ ಮುಖ್ಯ ಮಂತ್ರಿಗಳ ಗಮನ ಸೆಳೆದು ಪರಿಹಾರೊಪಾಯ ನೀಡಬೇಕಾಗಿತ್ತು ಅವರು ಈ ಕುರಿತು ಯೋಚಿಸದೇ ಇರುವುದು ಕೆಂಗಣ್ಣಿಗೆ ಗುರಿಯಾಗಿದೆ. 

ಶಿಕ್ಷಕರ ಕುಟುಂಬ ಸದಸ್ಯರು ಒಪ್ಪತ್ತಿನ ಊಟಕ್ಕೂ ಪರತಪಿಸುವ ಪರಸ್ಥಿತಿ ಬಂದೊದಗಿದೆ. ಶಿಕ್ಷಕ ವೃತ್ತಿ ಬಿಟ್ಟು ಬೇರೆ ಕೆಲಸ ಮಾಡೋಣವೆಂದರೂ ಸಾಧ್ಯವಾಗುತ್ತಿಲ್ಲ ಅದರೂ ಜೀವನೋಪಾಯಕ್ಕಾಗಿ ಹೊಲ ಮನೆ ಕೆಲಸ ಮಾಡಲು ಸಿದ್ಧರಾದರೂ ಅದು ಒಗ್ಗಿಕೊಳ್ಳುತ್ತಿಲ್ಲ, ಶಿಕ್ಷಕ ವೃತ್ತಿ ನೋಡಲು ಕೆಳಲು ತುಂಬಾ ಗೌರವಿತವಾದುದು ಆದರೆ ಶಿಕ್ಷರಾಗಿ ಸೇವೆ ಸಲ್ಲಿಸುವ ಖಾಸಗಿ ಶಾಲಾ ಶಿಕ್ಷಕರ ಪರಸ್ಥಿತಿ ಮಾತ್ರ ಯಾರಿಗೂ ಬರಬಾರದು ಎಂದು  ಶಿಕ್ಷಕ ಆನಂದ ಕುಲಕರ್ಣಿ ತಮ್ಮ ನೋವು ತೋಡಿಕೊಂಡಿದ್ದಾರೆ. ಕರೊನಾ 3 ನೇ ಅಲೆ ಅಪ್ಪಳಿಸಲಿದೆ ಎಂಬ ಮಾಹಿತಿಯಿಂದ ಮತ್ತಷ್ಟು ಕಂಗಾಲಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಯಾರು ಕೈ ಹಿಡಿದು ಮೇಲೆ ಏತ್ತುತ್ತಾರೋ ದೇವರಿಗೆ ಗೊತ್ತು ನೀರಲ್ಲಿ ಮುಳಗುವವರಿಗೆ ಹುಲ್ಲು ಕಡ್ಡಿ ಆಧಾರವಾದಿತು ಎಂಬ ನೀರಕ್ಷೇಯಲ್ಲಿ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು, ಅಪಾರ ಶಿಕ್ಷಕ ವರ್ಗ ಇದ್ದಾರೆ.  

“ ಸರ್ಕಾರ ಮಾಡುವ ಅರ್ಧಕ್ಕಿಂತಲೂ ಹೆಚ್ಚು ಕೆಲಸ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಇಂದು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ವರ್ಗ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಖಾಸಗಿ ಶಿಕ್ಷಣಗಳು ಉಳಿಯಬೇಕಾದರೆ ಸರ್ಕಾರ ವಿಶೇಷ ಪ್ಯಾಕೇಜ ನೀಡಿ ಪುಣ್ಯ ಕಟ್ಟಿಕೊಳ್ಳಬೇಕು.”

ಸುರೇಶ ಚಿಕ್ಕಟ್ಟಿ.

ಅಧ್ಯಕ್ಷರು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಅಥಣಿ. 

ಖಾಸಗಿ ಶಾಲಾ ಶಿಕ್ಷಕರ, ಸಂಸ್ಥೆಗಳ ಸಮಸ್ಯ ಗಳು ಗಮನಕ್ಕೆ ಬಂದಿವೆ.  ಶಿಕ್ಷಣ ಸಚಿವರ ಜೊತೆಗೆ ಸೇರಿ  ಎಲ್ಲ ವಿಧಾನ ಪರಿಷತ್ ಸದಸ್ಯರ ನಿಯೋಗ ತೆಗೆದುಕೊಂಡು ಮುಖ್ಯಮಂತ್ರಿಗಳಿಗೆ ಈಗಾಗಲೆ ಭೇಟಿಯಾಗಿ ಎಲ್ಲ ವಿಷಯ ಚರ್ಚೆ ಮಾಡಿ ಮನವರಿಕೆ ಮಾಡಿದ್ದೇವೆ. ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ.   

ಹಣಮಂತ  ಆರ್‌. ನಿರಾಣಿ.

ವಿಧಾನ ಪರಿಷತ್ ಸದಸ್ಯರು 


ಸುದ್ದಿ ಓದಿ