ಅಥಣಿ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆ: ಜಿಲ್ಲಾಧಿಕಾರಿ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆ: ಜಿಲ್ಲಾಧಿಕಾರಿ

ಅಥಣಿ: ಕಳೆದ ಒಂದು ತಿಂಗಳಿಂದ ಕೊರೊನಾ ಸೋಂಕು ಉಲ್ಬಣದಿಂದ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿತ್ತು ಸದ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆಂದು ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹೀರೆಮಠ ಹೇಳಿದರು. ಅವರು ಮಂಗಳವಾರ ಅಥಣಿ ಪಟ್ಟಣದ ರಾಣಿ ಚೆನ್ನಮ್ಮ ಕೋವಿಡ್ ಸೆಂಟರ್ ಕೇರ್ ಬೇಟಿ ನೀಡಿ ಅಲ್ಲಿರುವ ಸೊಂಕಿತರಿಗೆ ಜೊತೆ ಮಾತನಾಡಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ನಂತರದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ತಾಲೂಕು ಅಧಿಕಾರಿಗಳ ಜೋತೆ ಕೊರೋನಾ ಹತೋಟಿಗೆ ಕ್ರಮದ ಬಗ್ಗೆ ಸಭೆ ನಡೆಸಿದರು.

ಸಭೆ ನಂತರದಲ್ಲಿ ಮಾಧ್ಯಮ ಜೋತೆ ಬೆಳಗಾವಿ ಜಿಲ್ಲಾಧಿಕಾರಿ ಎಂ ಜಿ ಹೀರೆಮಠ ಮಾತನಾಡಿ, ಜಿಲ್ಲೆಯಲ್ಲಿ ಹಾಗೂ ಅಥಣಿ ತಾಲೂಕಿನಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆ, ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾಪೀಡ್ ಟೆಸ್ಟ್ ಮುಖಾಂತರ ಸೊಂಕಿತರನ್ನು ಕೋವಿಡ ಕೇರ ಸೇರಿಸಲಾಗುವುದು, ಸದ್ಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಅಥಣಿ ಸಮುದಾಯ ಹಾಗೂ ಬೆಳಗಾವಿ ಬಿಮ್ಸ ಆಸ್ಪತ್ರೆಯ ಬೆಟ್ ಕಾಲಿ ಇರುವುದು ಸೋಂಕು ಇಳಿಮುಖವಾಗಿದೆಂದು ತಿಳಿಸಿದರು. ಅಥಣಿ ತಾಲೂಕಿನಲ್ಲಿ ಕೋ ವ್ಯಾಕ್ಸೀನ್ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೋನಾ ಕೇರ್ ಸೆಂಟರ್ ಗಳಲ್ಲಿ ಒಳ್ಳೆಯ ಚಿಕಿತ್ಸೆ ನೀಡಲಾಗುತ್ತಿದೆ ಜನರು ಭಯ ಪಡದೆ ಕೊರೋನಾ ಲಕ್ಷಣ ಇದ್ದವರು ಪರಿಕ್ಷೆ ಒಳಪಡುವಂತೆ ಮನವಿ ಸಲ್ಲಿಸಿದರು. ಸಕರ್ಾರ ಘೋಷಿಸಿದ ಲಾಕ್ ಡೌನ್ ಜಿಲ್ಲೆಯಲ್ಲಿ ಜೂನ್ 7 ವರಿಗೆ ಮುಂದುವರಿಯುವುದೆಂದು ತಿಳಿಸಿದರು. ಹಾಗೂ ಹೋಬಳಿ ಮಟ್ಟದಲ್ಲಿ ಕೊರೊನಾ ಸೆಂಟರ್ ತೆರೆಯುತ್ತೆವೆ ಹಾಗೂ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸಿದ್ಧಗೊಂಡಿದೆಂದು ಪ್ರತಿಕ್ರಿಯಿಸಿದರು.  ಅಥಣಿ ಪಟ್ಟಣದ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ(26ಅಥಣಿ-01) 

ಸುದ್ದಿ ಓದಿ