ಶಿಗ್ಗಾವ್

ಕೊರೊನಾ ಮಾಸ್ಕ್ ಜನ ಜಾಗೃತಿ ಜಾಥಾ

ಕೊರೊನಾ ಮಾಸ್ಕ್ ಜನ ಜಾಗೃತಿ ಜಾಥಾ

ಶಿಗ್ಗಾವಿ : ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಗ್ಗಾವಿ ಪೋಲೀಸ್ ಇಲಾಖೆಯ ಆಶ್ರಯದಲ್ಲಿ ಕೊರೊನಾ ಮಾಸ್ಕ್ ಜನ ಜಾಗೃತಿ ಜಾಥಾವು ಮಂಗಳವಾರ ಜರುಗಿತು.ಪಟ್ಟಣದ ಚನ್ನಮ್ಮ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾತಾವು ಹಳೆ ಬಸ್ ನಿಲ್ದಾಣ, ಹೊಸ್‍ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ, ಮಾಸ್ಕ್ ಹಾಕದವರಿಗೆ ಜಾಗೃತಿ ಮೂಡಿಸಲಾಯಿತು, ಇದೇ ಸಂದರ್ಭದಲ್ಲಿ ಮಾಸ್ಕ್ ಹಾಕದವರಿಗೆ ದಂಡವನ್ನೂ ಸಹಿತ ವಿಧಿಸಿ ನಿಯಮ ಪಾಲನೆಗೆ ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯ ಹೆಚ್ಚುವರಿ ಆಯುಕ್ತ ವಿಜಯಕುಮಾರ, ಡಿವಾಯ್‍ಎಸ್‍ಪಿ ಓ ಬಿ ಕಲ್ಲೇಶಪ್ಪ, ಸಿ.ಪಿ.ಐ ಬಸವರಾಜ ಹಳಬಣ್ಣವರ, ಪಿಎಸ್‍ಐ ಕೆ ಎನ್ ಹಳ್ಳಿಯವರ ಸೇರಿದಂತೆ ಹಾವೇರಿ, ಬಂಕಾಪೂರ, ಸವಣೂರ ಹಾಗೂ ತಡಸ್ ಠಾಣೆಗಳ ಅಧಿಕಾರಿಗಳು ಪೋಲೀಸ್ ಇಲಾಖೆಯ ಸಿಬ್ಬಂದಿ ಜಾಗೃತಿ ಜಾತಾದಲ್ಲಿ ಭಾಗವಹಿಸಿದ್ದರು.

ಸುದ್ದಿ ಓದಿ