ಕಾರವಾರ

ಕೊರೋನಾ: ಶಾಸಕರ ಕಚೇರಿ ತಾತ್ಕಾಲಿಕವಾಗಿ ಸ್ಥಗಿತ

ಕೊರೋನಾ: ಶಾಸಕರ ಕಚೇರಿ ತಾತ್ಕಾಲಿಕವಾಗಿ ಸ್ಥಗಿತ

ಕಾರವಾರ 29: ಇಲ್ಲಿನ ಸ್ಥಳೀಯ  ಶಾಸಕರಾದ ರೂಪಾಲಿ ಎಸ್‌.ನಾಯ್ಕ ಅವರ ಕಾರವಾರದ ಕಚೇರಿ ಸಿಬ್ಬಂದಿಗೆ ಕೊರೋನಾ ಸೋಂಕು ಖಚಿತಪಟ್ಟ ಹಿನ್ನೆಲೆಯಲ್ಲಿ ಕಚೇರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.  

ಶಾಸಕರ ಆಪ್ತರಾದ ಅಮದಳ್ಳಿ ಗ್ರಾಪಂ ಅಧ್ಯಕ್ಷೆ  ಆಶಾ ನಾಯ್ಕ, ಕಚೇರಿಯ ಸಿಬ್ಬಂದಿ ಮಂಜುನಾಥ ಹಾಗೂ ಶಾಸಕರ  ಚಾಲಕನಿಗೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಹಾಗೂ ಇವರು ಆರೋಗ್ಯದಿಂದ ಹೋಂ ಕ್ವಾರೆಂಟೈನನಲ್ಲಿದ್ದಾರೆ. ಈ ಕಾರಣದಿಂದ ಶಾಸಕರ ಕಾರ್ಯಾಲಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.  

ಶಾಸಕರ ಕಾರ್ಯಾಲಯ ತಾತ್ಕಾಲಿಕವಾಗಿ ಬಂದ್ ಆಗಿರುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಶಾಸಕರ ಖಾಸಗಿ ಅಪ್ರ ಸಹಾಯಕ ಗುರುಪ್ರಸಾದ ನಾಯ್ಕ-7349749432, ಕಿಶನ್ ಕಾಂಬ್ಳೆ- 7975446717, ಶಾಸಕರ ಕಚೇರಿ ಸರ್ಕಾರಿ ಅಪ್ತ ಸಹಾಯಕ ಕವನ ಕುಮಾರ್‌- 9342422425, ಶಾಸಕರ ಖಾಸಗಿ ಮಾಧ್ಯಮ ಸಲಹೆಗಾಗ ಹಾವೇರಿ ಮಂಜುನಾಥ ಭಟ್ - 9632989428 ಇವರನ್ನು ಸಂಪರ್ಕಿಸಬಹುದು. 

ಲಸಿಕೆ ಹಾಕಿಸಿಕೊಳ್ಳಲು ವಿನಂತಿ:  

ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿದೆ. ಆದರೂ ಕೊರೋನಾ ಎರಡನೇ ಅಲೆ ತೀವ್ರವಾಗಿದೆ. ಕೇವಲ ಜ್ವರ, ನೆಗಡಿ, ಗಂಟಲುನೋವು, ಕೆಮ್ಮು ಅಷ್ಟೇ ಅಲ್ಲ, ಶ್ವಾಸಕೋಶಕ್ಕೂ ದಾಳಿ ಮಾಡುತ್ತಿದೆ. ಇದರಿಂದ ಜನತೆ ಜಾಗರೂಕತೆಯಿಂದ ಇದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶಾಸಕರು ವಿನಂತಿಸಿದ್ದಾರೆ. ಸರ್ಕಾರದಿಂದ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದ್ದು, ಪ್ರತಿಯೊಬ್ಬ ಅರ್ಹರೂ ಲಸಿಕೆ ಪಡೆಯುವ ಮೂಲಕ ಕೊರೋನಾ ನಿಯಂತ್ರಣ ಅಭಿಯಾನಕ್ಕೆ ಕೈಜೋಡಿಸುವಂತೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌.ನಾಯ್ಕ ವಿನಂತಿಸಿದ್ದಾರೆ. 


ಸುದ್ದಿ ಓದಿ