ತಾಳಿಕೋಟಿ

ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕಾರ ಅಗತ್ಯ

ತಾಳಿಕೋಟಿ23: ಸಹಕಾರಿ ಸಂಘಗಳು ಬೆಳೆಯಬೇಕಾದಲ್ಲಿ ಗ್ರಾಹಕರ ಸಹಕಾರ ಅಗತ್ಯ ಗ್ರಾಹಕರು ಸಾಲದ ಸದುಪಯೋಗವನ್ನು ಮಾಡಿಕೊಂಡು ಅದನ್ನು ಸಕಾಲಕ್ಕೆ ಮರುಳಿಸಿದಾಗ ಮಾತ್ರ ಸಂಘಗಳು ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ ಎಂದು ಬೊಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಪ್ಪ ಕಲಬುರ್ಗಿ  ತಿಳಿಸಿದರು.

ಸಮೀಪದ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ 46ನೇ ವಾರ್ಷಿಕ  ಸರ್ವಸಾಧಾರಣ ಮಹಾಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 

ಸದಸ್ಯ ನಿಂಗನಗೌಡ ಬಿರಾದಾರ ಮಾತನಾಡಿ ರೈತರು ಸಹಕಾರ ಸಂಘದಿಂದ ದೊರೆಯುವ ಸಾಲಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು.

ಗಡಿಸೋಮನಾಳದ ಇಂದುಧರ ಶ್ರೀಗಳು ಸಾನಿದ್ಯವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯ ಗುರುಬಸಪ್ಪ ಕಂಗಳ, ಬಸವರಾಜ ಬಿರಾದಾರ, ಮಹಾದೇವಿ ಅಮಲ್ಯಾಳ, ಶಿವಣ್ಣ ಹರನಾಳ ಮಾಳಪ್ಪ ಮಾಗಣಗೇರಿ, ಬಸನಗೌಡ ಬಿರಾದಾರ, ರಾಮಪ್ಪ ಹರಿಜನ, ಆಯ್.ಕೆ.ಮಣೂರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಬಿರಾದಾರ, ಎಸ್.ಜಿ.ಗುಂಡಲಗೇರಿ ಬಿ.ಟಿ.ಸದಬ ಇದ್ದರು 

ಸುದ್ದಿ ಓದಿ