ಯರಗಟ್ಟಿ

ತೀವ್ರತರ ಅತಿಸಾರ ಭೇದಿ ನಿಯಂತ್ರಣ: ಪಾಕ್ಷಿಕ ಕಾರ್ಯಕ್ರಮ

ತೀವ್ರತರ ಅತಿಸಾರ ಭೇದಿ ನಿಯಂತ್ರಣ: ಪಾಕ್ಷಿಕ ಕಾರ್ಯಕ್ರಮ

ಯರಗಟ್ಟಿ : ಸಮುದಾಯ  ಆರೋಗ್ಯ ಕೇಂದ್ರ- ಯರಗಟ್ಟಿಯಲ್ಲಿ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಉದ್ಘಾಟನೆ ಸಮಾರಂಭವನ್ನು ಏರಿ​‍್ಡಸಲಾಗಿತ್ತು,ಸದರಿ ಸಮಾರಂಭದ ಉದ್ಘಾಟನೆಯನ್ನು ಯರಗಟ್ಟಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ ಬಿ. ಎಸ್‌. ಬಳ್ಳೂರ ಇವರು ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ ಅತಿಸಾರ ಭೇಧಿಯಿಂದ ಶೇಕಡಾ 8ರಷ್ಟು ರಷ್ಟು 5 ವರ್ಷದೊಳಗಿನ  ಮಕ್ಕಳು ಸಾಯುತ್ತಿದ್ದು ಇದನ್ನು ತಡೆಗಟ್ಟಲು, ರೋಗದ ವಿರುದ್ಧ  ರೋಗ  ನಿರೋಧಕ ಶಕ್ತಿಯನ್ನು ಹೆಚ್ಚಿಗೆ ಮಾಡಿ ಮಕ್ಕಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಇದನ್ನು ಆರೋಗ್ಯ ಇಲಾಖೆಯಿಂದ - ದಿ. 15ರಿಂದ 28ರವರೆಗೆ ಪಾಕ್ಷಿಕ ಕಾರ್ಯಕ್ರಮವನ್ನಾಗಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.    

ಐ. ಆರ್‌. ಗಂಜಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಯರಗಟ್ಟಿ ಇವರು ಮಾತನಾಡಿ ಅತಿಸಾರ ಎಂದರೇ ಮಲವಿಸರ್ಜನೆಯಲ್ಲಿ ನೀರಿನಂತೆ ಕಂಡುಬರುವದಾಗಿದೆ, ಮಗು ಕಿರಿಕಿರಿ ಮಾಡುವದು, ಚರ್ಮ ಸುಕ್ಕುಗಟ್ಟುವದು, ಕಣ್ಣಿನಲ್ಲಿ ನೀರಿನಾಂಶ ಕಡಿಮೆಯಾಗಿ ಅತ್ತರೇ ನೀರು ಬರದಿರುವುದು, ಮೂತ್ರದ ಪ್ರಮಾಣ ಕಡಿಮೆಯಾಗುವದು, ಇವು ಅತಿಸಾರ ಭೇದಿಯ ಲಕ್ಷಣಗಳಾಗಿವೆ.   

ಕೈಗಳ ಶುಚಿತ್ವದ ಅಭಾವ, ವೈಯಕ್ತಿಕ ಆರೋಗ್ಯದ ತಿಳವಳಿಕೆಯ ಅಭಾವ, ಬಯಲು ಮಲ ವಿಸರ್ಜನೆ, ಪಾದರಕ್ಷೆ ಬಳಸದೆ ಇರುವದು, ಮಕ್ಕಳ ಅತಿಸಾರ ಭೇದಿಗೆ ಮುಖ್ಯ ಕಾರಣಗಳಾಗಿವೆ. ಜೋಪಡಿಪಟ್ಟಿಯ ಮಕ್ಕಳು, ಕಬ್ಬು ಕಡಿಯುವವರು, ತೋಟದ ಮನೆಮಕ್ಕಳು, ಕೊಳಚೆ ಪ್ರದೇಸದ ಮಕ್ಕಳು, ಕಿ,ಮ,ಆ,ಸ ಇಲ್ಲದ ಕ್ಷೇತ್ರದ ಮಕ್ಕಳು, ಹೆಚ್ಚಾಗಿ ಅತಿಸಾರಭೇದಿಗೆ ಒಳಗಾಗುವ ಸಾಧ್ಯತೆ ಇರುವದು ಎಂದು ಹೇಳಿದರು.  

ಸಮುದಾಯ ಆರೋಗ್ಯ ಅಧಿಕಾರಿ ಮಂಜುಳಾ ಈರಗಾರ ಇವರು ಮಾತನಾಡಿ ಬಾಯಿಯಲ್ಲಿ ಏನಾದರೂ  ಹಾಕುವ  ಮೊದಲು ಕೈಗಳನ್ನು 6 ವಿಧಾನಗಳಿಂದ ತೊಳೆಯುವದು, ತಲೆಯಿಂದ ಕಾಲಿನವರೆಗೆ ವೈಯಕ್ತಿಕ ಆರೊಗ್ಯವನ್ನು ಕಾಪಾಡಿಕೊಳ್ಳುವದು, ಬಯಲು ಮಲವಿಸರ್ಜನೆ ಬದಲು ಶೌಚಾಲಯವನ್ನು ಬಳಸುವದು, ಇದರ ಮಹತ್ವದ ಬಗ್ಗೆ ತಿಳಿಸುವದು, ಮತ್ತು ಶುದ್ದ ಕುಡಿಯುವ  ನೀರನ್ನು ಬಳಸುವದು, ಪಾದರಕ್ಷೆಗಳನ್ನು ಉಪಯೋಗಿಸುವದರಿಂದ ಅತಿಸಾರ ಭೇದಿಯನ್ನು ನಿಯಂತ್ರಿಸಬಹುದಾಗಿದೆ,  

ವಿಶೇಷವಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಾದಾಗ ನೀರಿನ ಅಂಶ ಕಡಿಮೆಯಾಗುತ್ತದೆ, ಇದನ್ನು ಸಜಲಿಕರಣ ಮಾಡುವ ಸಲುವಾಗಿ  ಓ,ಆರ್,ಎಸ್, ದ್ರಾವಣವನ್ನು ಬಳಸುವದು, ಇದರ ಜೊತೆಗೆ ಜಿಂಕ್ ಮಾತ್ರೆಯನ್ನು ಕೊಡುವದರಿಂದ ಮತ್ತು ಮನೆಯಲ್ಲಿರುವ ದ್ರವ  ಪದಾರ್ಥಗಳನ್ನು ಬಳಸಿ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು. 

ಡಾ ವೀಣಾ ಇಟ್ನಾಳಮಠ, ಡಾ ಮಡಿವಾಳೇಶ, ಡಾ ರಮಾಶ್ರೀ ಕನಗಲಿ, ಡಾ ವಿಜಯಲಕ್ಷ್ಮಿ, ಮಹಾಂತೇಶ ಕತ್ತಿ, ಮಂಜುನಾಥ ಸಿಂಗನ್ನವರ, ಮಾಯವ್ವಾ ಮುಗಳಿಹಾಳ, ರಾಮಚಂದ್ರ ಚನ್ನಯ್ಯನವರ, ರುದ್ರಗೌಡ ಪಾಟೀಲ ಅಶೋಕ ನೀಲನ್ನವರ, ತಾಯಂದಿರು ಸಾರ್ವಜನಿಕರು ಹಾಜರಿದ್ದರು.  ಮಾಂತೇಶ ಹಿರೇಮಠ ಕಾರ್ಯಕ್ರಮದ ನಿರೂಪಣೆ ಮಾಡಿ, ಎನ್ ಎಂ ಹಾರೂಗೊಪ್ಪ ಸ್ವಾಗತಿಸಿ, ಸಮೀರ ಗೊರೆಕಾನ ವಂದಿಸಿದರು. 


ಸುದ್ದಿ ಓದಿ