ಯರಗಟ್ಟಿ

ಆಧುನಿಕ ಜೀವನಕ್ಕೆ ವಿಜ್ಞಾನದ ಕೊಡುಗೆ ಅಪಾರ: ಬನಶೆಟ್ಟಿ

ಆಧುನಿಕ ಜೀವನಕ್ಕೆ ವಿಜ್ಞಾನದ ಕೊಡುಗೆ ಅಪಾರ: ಬನಶೆಟ್ಟಿ

ಲೋಕದರ್ಶನ ವರದಿ 

ಯರಗಟ್ಟಿ 04: ಜೀವನದಲ್ಲಿ ವಿಜ್ಞಾನ ಹಾಸುಹೊಕ್ಕಾಗಿರುವುದರಿಂದ ಪ್ರತಿಯೊಬ್ಬರು ಏಕೆ, ಹೇಗೆ, ಏನು ಎಂದು ಪ್ರಶ್ನಿಸುವ ಮನೋಭಾವ ಹೊಂದಿರಬೇಕು. ಆಧುನಿಕ ಜೀವನಕ್ಕೆ ವಿಜ್ಞಾನದ ಕೊಡುಗೆ ಅಪಾರವಾಗಿದೆ. ವಿಜ್ಞಾನಿಗಳ ಸಂಶೋಧನೆಯಿಂದ ಬೆರಗಾಗದೇ ಇನ್ನೂ ಅವಿಷ್ಕರಿಸಬೇಕಾದ ಹಲವಾರು ವಿಷಯಗಳಿದ್ದು ಅವುಗಳ ಕುರಿತು ವಿದ್ಯಾರ್ಥಿಗಳು ಅಲೋಚನೆ ಮಾಡಬೇಕು ಎಂದು ಕಟಕೋಳ ವಿಜ್ಞಾನ ಕಾಲೇಜಿನ ಉಪನ್ಯಾಸಕಿ ರೂಪಾ ಬನಶೆಟ್ಟಿ ಹೇಳಿದರು.  


ಅವರು ಸಮೀಪದ ಮುನವಳ್ಳಿ ಪಟ್ಟಣದ ಎಂ.ಎಲ್‌.ಇ.ಎಸ್‌. ಆಂಗ್ಲ ಮಾಧ್ಯಮ ಶಾಲೆ ಹಾಗೂ ಜೈಂಟ್ಸ್‌ ಗ್ರೂಪ್ ಸಂಯುಕ್ತಾಶ್ರಯದಲ್ಲಿ ಜರುಗಿದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ವಿಜ್ಞಾನ ವಸ್ತಗಳ ರಂಗೋಲಿ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

  

ಸಂಸ್ಥೆಯ ಅಧ್ಯಕ್ಷ ಉಮೇಶ ಬಾಳಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸುವುದರಿಂದ ಸಂಶೋಧನೆಯ ಹವ್ಯಾಸ ವಿದ್ಯಾರ್ಥಿ ದೆಸೆಯಿಂದಲೇ ಶುರುವಾಗುತ್ತದೆ ಎಂದರು. ಪ್ರಗು ಎ.ವಿ.ರೋಣದ, ದೀಪಾ ಚಂದರಗಿ, ಜೈಂಟ್ಸ್‌ ಗ್ರೂಪ್ ಅಧ್ಯಕ್ಷ ಯಲ್ಲಪ್ಪ ಪೂಜೇರ, ಉದಯ ಶೆಟ್ಟಿ, ವಿರಾಜ ಕೊಳಕಿ, ಅರುಣಗೌಡ ಪಾಟೀಲ, ರಾಜಶೇಖರ ಮಲ್ಲಾಪೂರಮಠ, ಬಸವರಾಜ ಭಜಂತ್ರಿ, ಕಿರಣ ನಾಯ್ಕರ, ಅಂಜುಮ ತೋಟಗಟ್ಟಿ, ಉಮಾ ಮೇದಾ, ಉಮಾ ಬೋಳಿಶೆಟ್ಟಿ, ಎ.ವಿ.ನರಗುಂದ, ಗೀತಾ ಪ್ರಭುನವರ ಹಾಗೂ ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ