ಕಾರವಾರ

ಸತತ ಮಳೆ: ಹೆಚ್ಚಾದ ವರದಾ ನದಿ ಒಳಹರಿವು

ಸತತ ಮಳೆ: ಹೆಚ್ಚಾದ ವರದಾ ನದಿ ಒಳಹರಿವು

ಬನವಾಸಿ: ಪಟ್ಟಣದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಹಳ್ಳ ಕೊಳ್ಳ ಕೆರೆಗಳು ನಿಧಾನವಾಗಿ  ತುಂಬಲಾರಂಭಿಸಿದೆ. ಈ ಭಾಗದ ಜೀವನದಿಯಾಗಿರುವ ವರದಾ ನದಿಯ ಒಳ ಹರಿವು ಹೆಚ್ಚಾಗುತ್ತಿದೆ. ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು ತಮ್ಮ ತಮ್ಮ ಹೊಲಗಳಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಳೆಗೆ ಬನವಾಸಿಯ ದಾಸನಕೊಪ್ಪ ವೃತ್ತದಲ್ಲಿ ಮಂಗಳವಾರ ಮುಂಜಾನೆ ಬೃಹತ್ ಮಾವಿನ ಮರ ಧರೆಗುರುಳಿದ್ದು ಅದೃಷ್ಟವಶಾತ್ ಯಾವುದೇ ಅನಾಹುತಾ ಸಂಭವಿಸಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವುಗೊಳಿಸಿದರು. 

ಸುದ್ದಿ ಓದಿ