ಕಾರವಾರ

ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಾಗಿರಬೇಕು : ಮುಲ್ಲೈ ಮುಗಿಲನ್

ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಾಗಿರಬೇಕು : ಮುಲ್ಲೈ ಮುಗಿಲನ್

ಕಾರವಾರ 17:  ಯಾವುದೇ ಹಕ್ಕುಗಳಾಗಲಿ ಸುಲಭವಾಗಿ ದೊರೆತಿಲ,್ಲ ಎಲ್ಲ ಹಕ್ಕುಗಳು ಹೋರಾಟದ ನಂತರವೇ ದೊರಕಿದ್ದು, ಅದರಲ್ಲಿ ಗ್ರಾಹಕರ ಹಕ್ಕು  ಕೂಡಾ ಒಂದಾಗಿದೆ. ಆದ್ದರಿಂದ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತು ಸದಾ ಜಾಗೃತಿರಾಗಿರಬೇಕೆಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹೇಳಿದರು. 

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ವತಿಯಿಂದ ನಗರದ ಖಾಸಗಿ ದಿವೇಕರ ವಾಣಿಜ್ಯ ಮಾಹಾವಿದ್ಯಾಲಯದಲ್ಲಿ ಬುಧವಾರ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ, ಅನ್ಯಾಯದ ವಿರುದ್ದ ದ್ವನಿ ಎತ್ತಿದಾಗ ಮಾತ್ರ ಹಕ್ಕುಗಳು ದೊರೆಯುತ್ತವೆ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ತಾನು ಕೊಂಡುಕೊಳ್ಳುವ  ವಸ್ತುಗಳ ಮೇಲೆ ಇರುವ ಎಮ್.ಆರ್.ಪಿ ಕ್ಯ್ವಾಲಿಟಿ, ಪೂರ್ಯುಟಿ, ಸ್ಯ್ಟಾಂಡರ್ಡ್ ಬಗ್ಗೆ ಮಾಹಿತಿ ಹೊಂದಿರಬೇಕು.  ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎದರು. ಈ  ವರ್ಷದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆಯ ಘೋಷ ವಾಕ್ಯ ಟ್ಯಾಕಲಿಂಗ್ ಪ್ಲಾಸ್ಟಿಕ್ ಪೊಲ್ಯುಶನ್ ಅಗಿದ್ದು, ನಾವು ಮತ್ತು ನಮ್ಮ ಸುತ್ತಮುತ್ತಲಿನ ಜನತೆ, ಪ್ಲಾಸ್ಟಿಕ್ ಚೀಲ ಮತ್ತು ವಸ್ತುಗಳನ್ನು ಖರೀದಿಸುವುದು ಮತ್ತು   ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಇದು ಪರಿಸರವನ್ನು ಕಾಪಾಡುವಲ್ಲಿ ಮಹತ್ವದ  ಪಾತ್ರ ವಹಿಸುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯಾ ಅವರು ಮಾತನಾಡಿ ಗ್ರಾಹಕರಾದವರು ಯಾವುದೇ ವಸ್ತುಗಳನ್ನು ಕೊಂಡಾಗ ವಸ್ತುಗಳ ರಶೀದಿಯನ್ನು ಪಡೆದುಕೊಳ್ಳಬೇಕು.  ಇದು ನಮಗೆ ಗ್ರಾಹಕರ ವೇದಿPಯಲ್ಲಿ ದಾವೆ ಹೂಡಲು ಸಹಕಾರಿಯಾಗಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗ್ರಾಹಕರ ವೇದಿಕೆಯಲ್ಲಿ ಹೆಚ್ಚು ದಾವೆಗಳೇ ಇಲ್ಲಾ, ಇದಕ್ಕೆ  ಕಾರಣ ಸಾರ್ವಜನಿಕರಲ್ಲಿ ಯಾವುದೇ ಮಾಹಿತಿ ಇಲ್ಲವೆಂದೇಳಬಹುದು. ಈ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಹಾಜರಿರುವ ವಿದ್ಯಾರ್ಥಿಗಳು ಮತ್ತು ಜನರು  ಗ್ರಾಹಕರ ಹಕ್ಕುಗಳ  ಕುರಿತು  ಹೆಚ್ಚು ಪ್ರಚಾರ ಪಡಿಸಿ ಜನರನ್ನು ಜಾಗೃತರನ್ನಾಗಿ ಮಾಡಬೇಕೆಂದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಸ್ಯ ಹಾಗೂ ಪ್ರಭಾರ ಅಧ್ಯಕ್ಷರಾದ ನಜೀರ ಅಹ್ಮದ್ ಯು.ಶೇಖ್ ಅವರು ಮಾತನಾಡಿ, ಜಿಲ್ಲಾ ಗ್ರಾಹಕರ ವೇಧಿಕೆ ಈಗ ಜಿಲ್ಲಾ  ಗ್ರಾಹಕರ ಆಯೋಗವಾಗಿರುತ್ತದೆ.  ಇಲ್ಲಿ ಒಂದು ಕೋಟಿ (ಮೊದಲು 20 ಲಕ್ಷ) ವರೆಗೆ ಪರಿಹಾರ ದೂರುಗಳನ್ನು ದಾಖಲಿಸಬಹುದಾಗಿರುತ್ತದೆ. ಗ್ರಾಹಕರು ದೂರು ದಾಖಲಿಸಲು ಜಿಲ್ಲಾ ರಾಜ್ಯ, ರಾಷ್ಟ್ರ ಎಂದು 3 ಆಯೋಗಳನ್ನು ರಚಿಸಲಾಗಿರುತ್ತದೆ. ಒಂದು ಕೋಟಿಯಿಂದ 10 ಕೋಟಿಯವರೆಗಿನ ಸರಕು ಸೇವೆಗಳ ದೂರುಗಳನ್ನು ರಾಜ್ಯ ಆಯೋಗದಲ್ಲಿ ಹಾಗೂ 10 ಕೋಟಿ ಗಿಂತ ಹೆಚ್ಚಿನ ಮೌಲ್ಯದ ದೂರು ಇದ್ದಲ್ಲಿ ರಾಷ್ಟ್ರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.  .  ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯಾವಹಾರಗಳ ಇಲಾಖೆಯ ಉಪನಿದೇರ್ಶಕ ಮಂಜುನಾಥ ರೇವಣಕರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಟಿ.ಎನ್ ದೇವರಾಜು ಅವರು ಸೇರಿದಂತೆ ಇತರರು ಉಪಸ್ಥಿರಿದ್ದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಮಾಪನ ಶಾಸ್ತ್ರ ಇಲಾಖೆ , ಕರ್ನಾಟಕ ವಿಶ್ವವಿದ್ಯಾಲಯದ ಪಿ.ಜಿ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸುದ್ದಿ ಓದಿ