ಜಾತಿ, ಧರ್ಮಕ್ಕಿಂತಲೂ ಸಂವಿಧಾನವೇ ಶ್ರೇಷ್ಠ: ಜಿರಲಿ
ಅಥಣಿ 28: ಡಾ.ಅಂಬೇಡ್ಕರ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನದ ಮೂಲ ಉದ್ದೇಶ ಸಂವಿಧಾನದ ಎದುರು ಎಲ್ಲರೂ ಸಮಾನರು ಯಾವುದೇ ಜಾತಿ, ಧರ್ಮಕ್ಕಿಂತಲೂ ಸಂವಿಧಾನವೇ ಶ್ರೇಷ್ಠವಾದುದು. ಸ್ವತಂತ್ರ ಭಾರತದಲ್ಲಿ ಭಾರತೀಯರಲ್ಲಿ ಸಮಾನತೆ ಮೂಡಿಸುವ ಹಾಗೂ ದೇಶದ ಆಡಳಿತ ಸೂಸುತ್ರವಾಗಿ ನಡೆಯಬೇಕು ಎನ್ನುವ ಉದ್ದೇಶದಿಂದ 1949 ನವ್ಹೆಂಬರ 26 ರಂದು ಡಾ.ಅಂಬೇಡ್ಕರ ರಚಿತ ಸಂವಿಧಾನವನ್ನೂ ಅಂಗೀಕರಿಸಲಾಯಿತು ಎಂದು ಬೆಳಗಾವಿಯ ಹಿರಿಯ ನ್ಯಾಯವಾದಿ ಎಮ್.ಬಿ.ಜಿರಲಿ ಹೇಳಿದರು.
ಅವರು ಅಥಣಿ ನ್ಯಾಯವಾದಿಗಳ ಸಂಘ ಸ್ಥಳೀಯ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಇಲ್ಲಿ ಬಡವರು, ಶ್ರೀಮಂತರು ಎನ್ನುವ ಭೇದ ಭಾವವೂ ಇಲ್ಲ ಎಲ್ಲರಿಗೂ ಸಮಾನ ಅಧಿಕಾರ ಹಾಗೂ ಕರ್ತವ್ಯಗಳನ್ನು ಸಂವಿಧಾನ ನೀಡಿದೆ ಎಂದ ಅವರು ಇಡೀ ವಶ್ವದಲ್ಲಿಯೇ ಭಾರತದಂತಹ ಸಂವಿಧಾನ ಯಾವ ದೇಶದಲ್ಲಿಯೂ ಇಲ್ಲ ಹೀಗಾಗಿಯೇ ಭಾರತದ ಸಂವಿಧಾನವನ್ನೇ ಅನೇಕ ದೇಶಗಳಲ್ಲಿ ಅನುಸರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಿನ್ಸಿಪಲ್ ಸೀನೀಯರ್ ಸಿವ್ಹಿಡ್ ಜಡ್ಜ ಆರ್.ಚಂದ್ರಾ್ಪ ಹೂನ್ನೂರ ಮಾತನಾಡಿ, ಡಾ.ಅಂಬೇಡ್ಕರರಲ್ಲಿಯ ಜ್ಞಾನದ ಪರಿಣಾಮದಿಂದಲೇ ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ದೊರಕಿದೆ. ಸಂವಿಧಾನದ ಮೂಲ ಆಶಯಗಳನ್ನು ಜನ ಸಾಮಾನ್ಯರು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಸಂವಿಧಾನವನ್ನು ಅಂಗೀಕರಿಸಿದ ನ. 26ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು ಸಾಮಾನ್ಯ ಕಾನೂನುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಈ ನಿಟ್ಟಿನಲ್ಲಿಯೇ ಕಾನೂನು ತಿಳುವಳಿಕೆ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ವಕೀಲರ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಕಿರಿಯ ಶ್ರೇಣಿಯ ನ್ಯಾಯಾಧೀಶ ಪ್ರಶಾಂತ ನಾಗಲಾಪೂರ ಇವರು ಕ್ರೀಮಿನಲ್ ಕಾನೂನು ಕುರಿತಾಗಿ, ಹಿರಿಯ ನ್ಯಾಯವಾದಿ ಆರ್.ಎನ್.ಸಿದ್ಧಾಂತಿ ಹಿಂದೂ ಕಾನೂನು ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಗೀರೀಶ, ಪಿಎಸ್ಐ ಕುಮಾರ ಹಾಡಕರ, ನ್ಯಾಯವಾದಿ ಸಂಘದ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.