ಒಬ್ಬ ವ್ಯಕ್ತಿಯಿಂದ ಸಂವಿಧಾನ ಬದಲಿಸುವ ಸಾಧ್ಯವಿಲ್ಲ: ನಡಹಳ್ಳಿ
ತಾಳಿಕೋಟೆ14 : ಯಾವೋದೋ ವ್ಯಕ್ತಿಯಿಂದ ದೇಶದ ಸಂವಿಧಾನ ಬದಲಿಸಲು ಸಾಧ್ಯವಿಲ್ಲ. ಸಂವಿಧಾನ ಬದಲಿಸುವ ಹೇಳಿಕೆಗಳಿಗೆ ರಾಜಕೀಯ ಬಣ್ಣ ಬಳಸಲಾಗುತ್ತದೆ. ರಾಜಕಾರಣದಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಹೇಳಿಕೆಗಳಿಗೆ ಜನ ಬೆಲೆ ಕೊಡಬಾರದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ .ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಅವರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ವತಿಯಿಂದ ನಡೆದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ 131 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂವಿಧನ ದೇಶದ ಉಸಿರಾಗಿದೆ. ಸಂವಿಧಾನದಡಿಯಲ್ಲಿಯೇ ಈ ದೇಶದ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಂವಿಧಾನ ಇಲ್ಲದೇ ಹೋದರೆ ಜನ ಬದುಕಲು ಸಾಧ್ಯವಿಲ್ಲ. ಸಂವಿಧನ ವಿರೋಧಿ ಹೇಳಿಕೆಗಳನ್ನು ಕೆಲವರು ರಾಜಕಾರಣದ ಸ್ವಹಿತಾಸಕ್ತಿಗಾಗಿ ಪರಿವರ್ತಿಸಿ ಹೇಳುತ್ತಾರೆ. ಇಂತಹ ಹೆಳಿಕೆಗಳಿಗೆ ಅಂಬೇಡ್ಕರ ಅಭಿಮಾನಿಗಳು ಕಿವಿ ಗೊಡಬಾರದು. ಸಂವಿಧಾನ ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡು ಹಿಂದು, ಮುಸ್ಲಿಂ, ಸಿಖ್ ಪಾರ್ಸಿಯನ್ನದೇ ದೇಶವನ್ನು ಕಟ್ಟಲು ಒಂದಾಗೋಣ ಎಂದರು.
ದಲಿತ ಮುಖಂಡ ಜೈಭೀಮ ಮುತ್ತಗಿ ಮಾತನಾಡಿ, ದಲಿತರ ಮೇಲಿನ ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮುಂದುವರೆದ ಜನಾಂಗದವರು ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿರುವದು ಎಷ್ಟು ಸಮಂಜಸ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಒಬ್ಬ ಜನಪ್ರತಿನಿದಿಯಾದವರು ಅವರ ಮಗಳಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವದು ದುರಂತವಾಗಿದೆ. ಎಸ್.ಸಿ.ಪಿ ಟಿಎಸ್.ಪಿ ಹಣ ದುರಪಯೋಗವಾಗುತ್ತಿದ್ದು ಅದನ್ನು ತಪ್ಪಿಸಸುವಂತೆ ಮನವಿ ಮಾಡಿದರು.
ಬಸವನ ಬಾಗೇವಾಡಿ ಬಾಲಿಕೆಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ಸಾಹಿತಿ ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಉಪಾಧ್ಯಕ್ಷ ಮುಸ್ತಫಾ ಚೌದ್ರಿ, ತಹಶಿಲ್ದಾರರ ಅನೀಲಕುಮಾರ ಢವಳಗಿ, ತಾಲ್ಲೂಕು ಪಂಚಾಯತಿ ಇಓ ಬಿ.ಆರ್.ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ದಲಿತ ಮುಖಂಡರುಗಳಾದ ಮುತ್ತಪ್ಪ ಚಮಲಾಪೂರ, ಮಾಳಪ್ಪ ಬಿಳೆಭಾವಿ, ಪರಶುರಾಮ ಕಟ್ಟಿಮನಿ, ರಾಘವೇಂದ್ರ ವಿಜಾಪೂರ, ಡಿ.ಬಿ.ಹಾದಿಮನಿ, ಹಣಮಂತ ಕೊಡಗಾನೂರ, ಮುಖ್ಯಶಿಕ್ಷಕ ಮಲ್ಲಪ್ಪ ಸಿ, ಹರೀಶ ನಾಟಿಕಾರ, ಜೈಬೀಮ ಮುತ್ತಗಿ ಇತರ ಪ್ರಮುಖರು ವೇದಿಕೆಯಲ್ಲಿದ್ದರು.
ಬೆಳಿಗ್ಗೆ ತಹಶೀಲ್ದಾರ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ತಾಲ್ಲೂಕಾ ಆಡಳಿತದಿಂದ ಗೌರವ ಸಲ್ಲಿಸಲಾಯಿತು. ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅವರ ಭವ್ಯ ಮೂರ್ತಿಗೆ ಹಾಗೂ ಭಾವಚಿತ್ರಕ್ಕೆ ಮಾಲಾರೆ್ಣಯ ನಂತರ ಭಾವಚಿತ್ರದ ಭವ್ಯಮೆರವಣಿಗೆ ನಡೆಯಿತು.