ಸಂವಿಧಾನವನ್ನು ಮನಬಂದಂತೆ ತಿದ್ದುಪಡಿ ಮಾಡಲು ಆಗುವುದಿಲ್ಲ: ಆಜೂರ
ಶಿಗ್ಗಾವಿ 27: ಪಟ್ಟಣದಲ್ಲಿ ಡಾ. ಬಿಆರ್ಅಂಬೇಡ್ಕರ್ ಪುತ್ತಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂವಿಧಾನ ದಿನಾಚರಣೆಯಲ್ಲಿ ತಾಲೂಕ ಕಾಂಗ್ರೆಸ ಬ್ಲಾಕ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರು ಮಾತನಾಡಿ ಸಂವಿಧಾನವನ್ನು ಮನಬಂದಂತೆ ತಿದ್ದುಪಡಿ ಮಾಡಲು ಆಗುವುದಿಲ್ಲ ತಿದ್ದುಪಡಿ ಮಾಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈ ಬಿಡಬೇಕು ಎಂದರು.
ಭಾರತದ ಸ್ವಾತಂತ್ರ್ಯ ಹಾಗೂ ಸಂವಿಧಾನ ನಿರ್ಮಾಣಕ್ಕೆ ಅನೇಕ ಮಹನೀಯರ ಕೊಡುಗೆ ಇದೆ ಅದರಲ್ಲಿ ಸಂವಿಧಾನ ನಿರ್ಮಾಣಕ್ಕೆ ಬಾಬಾ ಸಾಹೇಬರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಬ್ಲಾಕ್ ಕಾಂಗ್ರೆಸ್ ವಕ್ತಾರ ಮಂಜುನಾಥ ಮಣ್ಣಣ್ಣವರ್ ಮಾತನಾಡಿ ದೇಶದ ಆಡಳಿತ ಹಾಗೂ ಕಾನೂನು ನ್ಯಾಯಾಂಗ ಇರುವುದೇ ಸಂವಿಧಾನದ ನಿಯಮಗಳ ಮೇಲೆ ಇಂತಹ ಪವಿತ್ರ ಸಂವಿಧಾನವನ್ನು ಗೌರವಿಸುವುದು ಸಂವಿಧಾನ ಆದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ ಜೊತೆಗೆ ವೀರ ಮಹಿಳೆ ವನಕೆ ಓಬವ್ವನ ಜಯಂತಿಯಲ್ಲಿ ಭಾಗವಹಿಸುವುದೇ ಒಂದು ಸೌಭಾಗ್ಯ ಈ ತಾಯಿಯ ಧೈರ್ಯ ಶೌರ್ಯ ಎಲ್ಲರಿಗೂ ಸದಾ ಸ್ಮರಣೀಯ ಎಂದು ಹೇಳಿದರು.
ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಾಬರ್ ಬಾಲಾಜಿ, ಶಹರ ಘಟಕದ ಅಧ್ಯಕ್ಷ ಚಂದ್ರು ಕೊಡ್ಲಿವಾಡ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅನಿಲ್ ಭದ್ರಾಪುರ ಮಾತನಾಡಿದರು ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಸುಲೇಮಾನ್ಖಾನ್ ಖಾಜಾಕಾನವರ, ಪರವಿಜ್ ಮುಲ್ಲಾ, ಜಿಲ್ಲಾಎಸ್ ಸಿಘಟಕದ ಉಪಾಧ್ಯಕ್ಷ ಶಿವಪ್ಪ ವಡ್ಡರ್, ವಿಜಯ ಪಾಟೀಲ್, ಪ್ರವೀಣ ಧಾರವಾಡ, ಅತ್ತಾವುಲ್ಲಾಖಾನ್, ವಸಂತ ಬಡ್ಡಿ, ಮಂಜುನಾಥ್ ಕಂಕನವಾಡ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಫಕೀರ್ಪಕುಂದೂರ, ಮಹೇಶ್ ತಳವಾರ, ಕರೀಂಸಾಬ್ ನದಾಫ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.