ಯರಗಟ್ಟಿ

ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚಾರ

ಯರಗಟ್ಟಿ 08: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಪಟ್ಟಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು. 

ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾದ ರಥವು ಸಂಚರಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಿತು. 

ಡಾ. ಕುಮಾರ ದಾಸರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ 

ಈ ಸಂದರ್ಭದಲ್ಲಿ ತಹಶೀಲ್ದಾರ ಎಮ್‌. ಎನ್‌. ಮಠದ, ಪ. ಪಂ. ಮುಖ್ಯಾಧಿಕಾರಿ ಡಿ. ಎನ್‌. ತಹಶೀಲ್ದಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್‌. ಆರ್‌. ಕುಲಕರ್ಣಿ, ಸಿಪಿಐ ಆಯ್‌. ಎಂ. ಮಠಪತಿ, ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್‌. ಆರ್‌. ಗಂಜಿ, ಕೃಷಿ ಇಲಾಖೆ ಎಡಿಎ ಶಿವಪ್ರಕಾಶ ಪಾಟೀಲ, ಪಶು ವೈದ್ಯಾಧಿಕಾರಿ ಡಾ ಎಮ್ ವಿ. ಪಾಟೀಲ, ಪ್ರೊ. ಆರ್‌. ಎಸ್‌. ಮರಿಗೌಡರ, ನಿವೃತ್ತ ಶಿಕ್ಷಕರಾದ ಪಿ. ಎಚ್‌. ಪಾಟೀಲ, ಬಿ. ಎಸ್‌. ಆಲದಕಟ್ಟಿ, ಎ. ಎ. ಮಕ್ತುಮನ್ನವರ, ದಲಿತ ಮುಖಂಡರಾದ ಪ್ರಕಾಶ ಚನ್ನಮೇತ್ರಿ, ಭಾಸ್ಕರ ಹಿರೇಮೆತ್ರಿ, ಸುರೇಶ ಭಜಂತ್ರಿ, ವಿಲ್ಸನ್ ಸೊಪ್ಪಡ್ಲ, ಸಂತೋಷ ಚನ್ನಮೇತ್ರಿ, ಲಕ್ಕಪ್ಪ ಹುಣಶೀಕಟ್ಟಿ, ಬಾಬು ಚನ್ನಮೇತ್ರಿ, ಚಿದಂಬರ ಕಟ್ಟಿಮನಿ, ಸ್ಥಳೀಯರಾದ ಶಿವಾನಂದ ಕರಿಗೊಣ್ಣವರ, ರಫೀಕ್ ಡಿ. ಕೆ., ಸಲಿಂ ಜಮಾದಾರ, ಅರುಣ ನೀಲಪ್ಪನವರ, ಫೀರೋಜ ಖಾದ್ರಿ, ಈರಣ್ಣಾ ಹೂಲ್ಲೂರ, ಮಂಜುನಾಥ ನೀಲಪ್ಪನವರ, ಸೋಮು ರೈನಾಪೂರ ಸೇರಿದಂತೆ ಅನೇಕ ಮುಖಂಡರು ಅಧಿಕಾರಿಗಳು ಉಪಸ್ಥಿತರಿದ್ದರು. ವಸತಿ ನಿಲಯದ ವಾರ್ಡನಗಳಾದ ಸೋಮು ಮಾಳಗಿ ಸ್ವಾಗತಿಸಿದರು ಆಶಾ ಪರೀಟ ವಂದಿಸಿದರು. 

ಗ್ರಾಮದ ಗಣ್ಯರು, ಮುಖಂಡರು, ಮುದ್ದು ಮಕ್ಕಳು, ಶಿಕ್ಷಣ, ಶಿಕ್ಷಕಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. 


ಸುದ್ದಿ ಓದಿ