ಯರಗಟ್ಟಿ

ಸಂವಿಧಾನ ದಿನಾಚರಣೆ : ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ

ಸಂವಿಧಾನ ದಿನಾಚರಣೆ : ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ

ಯರಗಟ್ಟಿ: ವಿದ್ಯಾರ್ಥಿಗಳು ಸಂವಿಧಾನವನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಮುಖ್ಯ ಶಿಕ್ಷಕ ಡಿ. ಡಿ. ಬೋವಿ ಹೇಳಿದರು. 

ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ದೈಹಿಕ ಶಿಕ್ಷಕ ಎಸ್‌.ಎಮ್‌.ಹಂಜಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. 

ಶಿಕ್ಷಕ ಪಿ.ಎಸ್‌.ವಿಜಾಪೂರ, ಆರ್‌.ಎಚ್‌.ಅತ್ತಾರ, ಎಸ್‌.ಎಫ್‌.ಮುರಗನ್ನವರ, ಎ.ಎ.ಮಾನೆ, ಎಂ.ಎ.ಬಸರಿಮರದ, ಎಸ್‌.ಎಮ್‌.ಮಾಳೈನವರ, ಸಿ.ಆರ್‌.ಕಮ್ಮಾರ, ಅಶ್ವಿನಿ ಹಿರೇಮಠ, ಪುಷ್ಪಾ ನಾಯ್ಕರ, ವಿಜಯಲಕ್ಷ್ಮೀ ಬಾವಿಕಟ್ಟಿ, ಭೀಮವ್ವ ಉಪ್ಪಾರ ಹಾಗೂ ವಿದ್ಯಾರ್ಥಿಗಳು ಇದ್ದರು.  ಯರಗಟ್ಟಿ ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. 


ಸುದ್ದಿ ಓದಿ