ಸಂವಿಧಾನ ಜಾಗೃತಿ ಜಾಥಾ: ಅದ್ದೂರಿ ಸ್ವಾಗತ
ಯರಗಟ್ಟಿ 13: ಸಮೀಪದ ಮಾಡಮಗೇರಿ ಗ್ರಾಮಕ್ಕೆ ಸೋಮವಾರ ಆಗಮಿಸಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರ ಸ್ಥಳೀಯರಿಂದ ಅದ್ದೂರಿ ಸ್ವಾಗತ ಮಾಡಲಾಯಿತು.
ಗ್ರಾ. ಪಂ. ಅಧ್ಯಕ್ಷರಾದ ಸರಸ್ವತಿ ಖಂಡ್ರಿ, ಗ್ರಾ. ಪಂ. ಪಿಡಿಓ ವೈ ಎಚ್ ಶೇರಿ, ಗ್ರಾ. ಪಂ. ಉಪಾಧ್ಯಕ್ಷ ಮಹಾದೇವಿ ಘಟನಟ್ಟಿ , ಸರ್ವ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೋಡಲ ಅಧಿಕಾರಿ ಪ್ರಕಾಶ ಬಿರಾದರ ಪಾಟೀಲ, ಸಮಾಜ ಕಲ್ಯಾಣ ಅಧಿಕಾರಿ ಆರ್. ಆರ್. ಕುಲಕರ್ಣಿ, ಸೋಮು ಮಾಳಗಿ, ಆಶಾ ಪರೀಟ ಮತ್ತು ದಲಿತ ಸಂಘದ ಮುಖಂಡರು ಮಾಡಮಗೇರಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಶಾಲಾ ಅಂಗನವಾಡಿ ಮಕ್ಕಳು ಹಾಗೂ ಶಿಕ್ಷಕರು ಪಂಚಾಯತ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.