ಸಂವಿಧಾನ, ನಾಯಕತ್ವ, ಉತ್ತಮ ಆಡಳಿತ ಅರಿವು ಕಾರ್ಯಕ್ರಮ
ಸಿಂದಗಿ: ದೇಶಕ್ಕೆ ಸ್ವಾತ್ರಂತ್ರ-್ಯ ಸಿಕ್ಕಿದಾಗ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕು ಇದ್ದಿದಿಲ್ಲ. ಇಂದು ನಾವೆಲ್ಲರೂ ಮತದಾನವನ್ನು ಮಾಡುತ್ತೇವೆಂದರೆ ಅದಕ್ಕೆ ಕಾರಣ ಡಾ.ಬಾಬಾ ಸಾಹೆಬ್ ಅಂಬೇಡ್ಕರವರು ಹಕ್ಕು ಕಲ್ಪಿಸಿಕೊಟ್ಟಿದ್ದಾರೆ ಆದರೆ ಇಂದು ನಾವು ನಮ್ಮ ಮತವನ್ನು ಕೇವಲ 2000 ರೂಗಳಿಗೆ ಮಾರುವದನ್ನು ಬಿಟ್ಟು ಮತದಾನದ ಮುಖಾಂತರ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗಿರ್ ಮುಲ್ಲಾ ಹೇಳಿದರು,
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಯುವಕರಿಗೆ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂವಿಧಾನ, ನಾಯಕತ್ವ ಹಾಗೂ ಉತ್ತಮ ಆಡಳಿತ ಅರಿವು ಕಾರ್ಯಕ್ರವವನ್ನು ಉದ್ಘಾಟಿಸಿ ಮಾತನಾಡಿ, ಬಹುತ್ವ, ಸಮಾನತೆ, ಸಹೋದರತ್ವ ಮತ್ತು ಮೂಲಭೂತ ಹಕ್ಕುಗಳು. ಸಂವಿಧಾನದಲ್ಲಿ ಸಜೀವ ಮತ್ತು ನೀರ್ಜೀವ ಎರಡಕ್ಕೂ ಅವಕಾಶ ಇದೆ. ನಮ್ಮ ಸಂವಿಧಾನದಲ್ಲಿ ಎಲ್ಲವು ಅಡಗಿಕೊಂಡಿದೆ-ನಮ್ಮ ದೇಶದಲ್ಲಿ ಬದುಕುವ ಎಲ್ಲಾ ಜನರಿಗೆ ಬಟ್ಟೆ, ಆಹಾರ, ಶಿಕ್ಷಣ, ಆರೋಗ್ಯ, ನಿರೋದ್ಯೋಗಿ ಯುವಕರಿಗೆ ಉದ್ಯೋಗ ಹಾಗೂ ನೆಲೆ ನಿಲ್ಲಲು ಮನೆ ಉಚಿತವಾಗಿ ನೀಡಲು ಸಂವಿಧಾನದ ಹೇಳುತ್ತದೆ. ಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆ ಕುರಿತು ಮಾತನಾಡಿದ್ದಾರೆ ಹಾಗೂ ಮೂರ್ತಿ ಪೂಜೆ ಖಂಡನೆ ಮಾಡಿದ್ದಾರೆ. ಅವರ ವಿಚಾರಧಾರೆಗಳು ತುಂಬಾ ಚೆನ್ನಾಗಿ ಇವೆ. ಯುವಕರು ಸಂವಿಧಾನದ ಆಶಯಗಳು ತಿಳಿದುಕೂಂಡು, ಪ್ರತಿಯೊಬ್ಬ ಯುವಕನು ನಾಯಕತ್ವ ಬೆಳೆಸಿಕೊಂಡು ಉತ್ತಮ ಆಡಳಿತ ತರುವುದರ ಮೂಲಕ ಒಳ್ಳೆಯ ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದರು.
ಡಿಎಸ್ಎಸ್ ತಾಲೂಕ ಸಂಚಾಲಕ ಪರಶುರಾಮ ಕಾಂಬಳೆ, ಸಂಗಮ ಸಂಸ್ಥೆ ನಿರ್ದೇಶಕ ಪಾಧರ್ ಆಲ್ವಿನ್ ಡಿ’ಸೋಜ ಮಾತನಾಡಿ, ನಾಯಕತ್ವ ಎಂದರೆ ಇದ್ದದ್ದು ಇದ್ದ ಹಾಗೆ ಹೇಳುವುದು. ಉತ್ತಮ ಸಮಾಜ ಕಟ್ಟಲು ಯುವಕರ ಪಾತ್ರ ಬಹಳ ಮುಖ್ಯವಾಗಿದ್ದು ಮೊಬೈಲ್ ಆಫ್ ಬಂದು ಮನುಷ್ಯನಿಂದ ಮನುಷ್ಯ ದೂರ ಆಗುತ್ತಿದ್ದಾರೆ. ಯುವ ಸಮುದಾಯ ಅರಿವು ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಕೂಡಬೇಕು ಪ್ರತಿಯೊಂದು ಹಂತದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಯುವಕರು ಸಂಸ್ಥೆಯ ನಡೆಯುವ ಅರಿವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರಜೆಗಳಾಗಲು ಪ್ರಯತ್ನಿಸಬೇಕು ಎಂದು ತಿಳಿಸಿದರು..
ಈ ಕಾರ್ಯಕ್ರಮದಲ್ಲಿ ಸಂಗಮ ಸಂಸ್ಥೆ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಲಕಪ್ಪ ಹಲಗಿ ಸ್ವಾಗತಿಸಿದರು, ರಾಜೀವ ಕುರಿಮನಿ ನಿರೂಪಿಸಿದರು, ತೇಜಸ್ವಿನಿ ಹಳ್ಳದಕೇರಿ ಭಾರತದ ಪ್ರಸ್ಥಾವನೆಯನ್ನು ವಾಚಿಸಿದವರು ಹಾಗೂ ವಿಜಯ ಬಂಟನೂರ ಇವರು ವಂದಿಸಿದರು.