ಶಿಗ್ಗಾವ್

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಶಿಗ್ಗಾವಿ 12: ಪೆಟ್ರೋಲ್, ಡೇಸೆಲ್, ಗ್ಯಾಸ್ ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಭಾರಿ ತೊಂದರೆಯಾಗುತ್ತಿದೆ. ಕೃಷಿ ಕಾಂiÀÉ್ದುಗಳು ರೈತಕುಲಕ್ಕೆ ಮಾರಕವಾಗಿವೆ. ದಿನಬಳಕೆ ವಸ್ತುಗಳ ಬೆಲೆ ನಿಯಂತ್ರಿಸಬೇಕು ಹಾಗೂ ಕೃಷಿ ತಿದ್ದುಪಡಿ ಕಾನೂನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಇದಕ್ಕೂ ಮುಂಚೆ ಪಟ್ಟಣದ ಪುರಸಭೆ ವೃತ್ತದಿಂದ ಹಳೇ ಬಸ್ ನಿಲ್ದಾಣ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

 ಬ್ಲಾಕ್ ಅಧ್ಯಕ್ಷ ಎಂ.ಎನ್.ವೇಂಕೋಜಿ ಮಾತನಾಡಿ, ಸಹಸ್ರಾರು ರೈತರು ಜೀವ, ಜೀವನ ಹಾಗೂ ಭವಿಷ್ಯ ಕಾಪಾಡಿಕೊಳ್ಳಲು ಐತಿಹಾಸಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.  ಆದರೆ ಕೇಂದ್ರ ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಸೋಮಣ್ಣ ಬೇವಿನಮರದ ಮಾತನಾಡಿ, ಕರಾಳ ಕೃಷಿ ಕಾನೂನು ಜಾರಿಗೊಳಿಸ ಅಂಗೀಕರಿಸಿದಾಗಿನಿಂದಲೂ ದೇಶದ ಅನ್ನದಾತರಪರ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ. ಹೋರಾಟದಲ್ಲಿ 155 ರೈತರು ಪ್ರಾಣ ಕಳೆದಕೊಂಡಿರುತ್ತಾರೆ. ಇದನ್ನು ಲೆಕ್ಕಿಸದೇ ದೇಶದ ಪ್ರಧಾನಿ ಹಾಗೂ ಬಿ.ಜೆ.ಪಿ ಸರ್ಕಾರ ರೈತರ ಸಂಕಷ್ಟ ಆಲಿಸಲು ಸಿದ್ದವಿಲ್ಲ ಎಂದು ಹರಿಹಾಯ್ದರು. ಕಾಂಗ್ರೆಸ್ ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು.

ಪ್ರಕಾಶ ಹಾದಿಮನಿ, ಎಸ್.ಎಫ್.ಮಣಕಟ್ಟಿ, ಹನುಮರೆಡ್ಡಿ ನಡುವಿನಮನಿ ಮಾತನಾಡಿದರು, ಮುಖಂಡರಾದ ಷಣ್ಮುಖ ಶಿವಳ್ಳಿ, ಕೇದಾರಪ್ಪ ಬಗಾಡೆ, ಗುಡ್ಡಪ್ಪ ಜಲದಿ, ಗುರುಗೌನಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಪ್ರೇಮಾಪಾಟೀಲ, ವೀರೇಶ ಆಜೂರ, ಶ್ರೀಕಾಂತ ಪೂಜಾರ, ಶಿವಾನಂದ ಬಾಗೂರ, ಪುರಸಭೆ ಸದಸ್ಯ ಗೌಸಖಾನ ಮುನಶಿ, ವಸಂತಾ ಬಾಗೂರ, ಮಂಜುನಾಥ ತಿಮ್ಮಾಪೂರ, ಅಣ್ಣಪ್ಪ ಲಮಾಣಿ, ಸುಧೀರ ಲಮಾಣಿ, ಅಶೋಕ ಗಾಣಿಗೇರ, ಮಜೀದ ಮಾಳಗಿಮನಿ, ಈಸೂಫ ಭಾವೀಕಟ್ಟಿ, ರಶೀದ ಗೋಟಗೋಡಿ, ಸುಮಿತ ಸೂರ್ಯವಂಶಿ ತಾಲೂಕಿನ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ