ರಾಣೆಬೆನ್ನೂರ

ರಾಣೇಬೆನ್ನೂರಲ್ಲಿ ಕಾಂಗ್ರೆಸ್ ಪ್ರತಿಭಟನೆ: ಬಂದ್ ಯಶಸ್ವಿ, ಕಪ್ಪು ಬಟ್ಟೆ ಪ್ರದರ್ಶನ

ರಾಣೇಬೆನ್ನೂರಲ್ಲಿ ಕಾಂಗ್ರೆಸ್ ಪ್ರತಿಭಟನೆ: ಬಂದ್ ಯಶಸ್ವಿ, ಕಪ್ಪು ಬಟ್ಟೆ ಪ್ರದರ್ಶನ

ರಾಣೆಬೆನ್ನೂರು 22:  ಕೊಡಗು ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ ಮೇಲೆ ಕಪ್ಪು ಬಟ್ಟೆ, ಮೊಟ್ಟೆ ಫೋಟೋ  ಎಸೆತ ಖಂಡಿಸಿ ಆಗಸ್ಟ್‌ 22ರಂದು ಸೋಮವಾರ ಸಿದ್ದರಾಮಯ್ಯನವರ ಸರ್ವ ಜನಾಂಗಗಳ ಅಭಿಮಾನಿ ಬಳಗವು ಕರೆದಿದ್ದ ರಾಣೆಬೆನ್ನೂರು ಬಂದ್ ಭಾಗಶಃ ಯಶಸ್ವಿಯಾದಂತಾಗಿದೆ. ನಗರದ ಕೆಇಬಿ ವಿನಾಯಕ ದೇವಸ್ಥಾನದಿಂದ ಹೊರಟ ಭಾರಿ ಜನ ಸಮುದಾಯದಿಂದ ಕುಡಿದ  ಪ್ರತಿಭಟನಾ ಮೆರವಣಿಗೆಯು, ಬಸ್ಟಾಂಡ್ ಬಳಿ ಬರುತ್ತಿದ್ದಂತೆ, ಮಾನವ ಸರಪಳಿ ನಿರ್ಮಿಸಿದ ಸಾವಿರಾರು ನಾಗರಿಕರು ಸಂಪತ್ ನ್ನು ಬಂಧಿಸಬೇಕು, ಕುಮ್ಮಕ್ಕು ನೀಡುತ್ತಿರುವ ಸಂಘ ಮತ್ತು ಸಂಘ ಪರಿವಾರದ ವ್ಯಕ್ತಿಗಳ ಮೇಲೆ ಸಿಬಿಐ ತನಿಖೆಗೆ ಒಳಪಡಿಸಬೇಕು ಆ ಸಮರ್ಥ, ನಿಷ್ಕಾಳಜಿ ಗೃಹಸಚಿವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಎಂದು ಒಕ್ಕೊರಲ ಆಗ್ರಹಿಸಿದರು ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಎಲ್ಲರಿಗೂ ಸೂಕ್ತ ಭದ್ರತೆಯನ್ನು ಸರಕಾರ ಒದಗಿಸಬೇಕು, ಆನಾಗರಿಕ ಸಂಸ್ಕೃತಿ ನಡೆದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಧಾನ ಅಂಚೆ ಕಚೇರಿ ಬಾಪೂಜಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾನಿರತರು ಸಭೆಯಾಗಿ ಮಾರಿ​‍್ಡಸಿದರು, ನಂತರ ಮಾತನಾಡಿದ ಯುವನಾಯಕ ಪ್ರಕಾಶ್ ಕೋಳಿವಾಡ ಅವರು, ಸಿದ್ದರಾಮಯ್ಯನವರು ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶಗಳನ್ನು ವೀಕ್ಷಿಸಲು ಹೋದಾಗ ಅಲ್ಲಿಯ ಬಿಜೆಪಿಯ ಸಂಘಪರಿವಾರದವರು ಕಪ್ಪು ಬಟ್ಟೆ ಪ್ರದರ್ಶಿಸಿ, ಮೊಟ್ಟೆ ಫೋಟೋ ಎಸೆದು, ಈ ನಾಡಿನ ಮಾಜಿ ಮುಖ್ಯಮಂತ್ರಿಗಳನ್ನು ಅವಮಾನಿಸಿದ್ದಾರೆ. ಇದು ನಮ್ಮ ನಾಡಿನ ಸಂಸ್ಕೃತಿಯಲ್ಲ, ಇಂತಹ ದುಷ್ಟಶಕ್ತಿಗಳಿಗೆ ಕಾಂಗ್ರೆಸ್ ಎಂದಿಗೂ ಮಣೇ ಹಾಕುವುದಿಲ್ಲ. ಎಂದು ಕಿಡಿಕಾರಿದರು.ಇ  ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಸ್‌. ಮರದ,ರವೀಂದ್ರ ಗೌಡ ಪಾಟೀಲ್, ಸಣ್ಣ ತಮ್ಮಪ್ಪ ಬಾರ್ಕಿ, ಪಿ. ಜೆ. ಮರಿಯಮ್ಮನವರ, ಸಿದ್ದಣ್ಣ ಅಂಬಲಿ, ಡಾ : ಪ್ರವೀಣ ಖನ್ನೂರ್, ರುಕ್ಮಿಣಿಬಾಯಿ ಸಾಹುಕಾರ್, ಸಿದ್ದಪ್ಪ ಬಾಗಲರ, ಮಂಜನ ಗೌಡ ಪಾಟೀಲ್, ಕೃಷ್ಣಪ್ಪ ಕಂಬಳಿ, ಶಿವಾನಂದ ಕನ್ನಪ್ಪಳವರ, ನೀಲಕಂಠಪ್ಪ ಕುಸುಗೂರ್, ಹನುಮಂತಪ್ಪ ಕಬ್ಬಾರ, ಸೇರಿದಂತೆ ಮತ್ತಿತರ ಮುಖಂಡರು ಮಾತನಾಡಿ, ಸಿದ್ದರಾಮಯ್ಯನವರ ಮೇಲೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದರು ಪ್ರತಿಭಟನೆಯ ಮುಂಚೂಣಿಯಲ್ಲಿ, ಕೃಷ್ಣಮಣ್ಣಣ್ಣನವರ, ನಿಂಗರಾಜ್ ಕೋಡಿಹಳ್ಳಿ, ನೂರಜಹಾನ್ ನಂದ್ಯಾಲ್, ಶೀರೀನ್ ತಾಜ್ ಸೆಖ್, ಎನ್‌.ಪಿ.ಮರಿಯಮ್ಮನವರ,, ವಿ.ಪಿ. ಪೋಲಿಸ ಗೌಡ್ರ ಆನಂದ್ ಹುಲಬನ್ನಿ, ಸೇಳಿದಂತೆ ಕಾಂಗ್ರೆಸ್ ಯುವ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗದ ಸಾವಿರಾರು ಕಾರ್ಯಕರ್ತರು, ಗ್ರಾಮೀಣ ಪ್ರದೇಶದ ನಾಗರಿಕರು  ಪಾಲ್ಗೊಂಡಿದ್ದರು. 


ಸುದ್ದಿ ಓದಿ