ಕಾಂಗ್ರೆಸ ಪಕ್ಷದ ಸದಸ್ಯತ್ವ ಕಾರ್ಯಕ್ರಮ
ಲೋಕದರ್ಶನ ವರದಿ
ಶಿಗ್ಗಾವಿ 11: ಪಟ್ಟಣದ ಸುನೀಲ ಕುರ್ಸಾಪೂರ ಅವರ ಕಾಂಪ್ಲೇಕ್ಸನ ಗೌಸಖಾನ ಮುನಶಿ ಅವರ ಮಳಿಗೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೇಸ ಸಮಿತಿಯ ಆದೇಶದ ಮೇರೆಗೆ ಇಂದು ಕಾಂಗ್ರೇಸ ಪಕ್ಷದ ಸದಸ್ಯತ್ವ ಕಾರ್ಯಕ್ರಮ ಅಭಿಯಾನವನ್ನು ಪುರಸಭೆ ಸದಸ್ಯ ಗೌಸಖಾನ ಮುನಶಿ ನೇತೃತ್ವದಲ್ಲಿ ಕಾರ್ಯಕರ್ತರ ಸದಸ್ಯತ್ವ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮುಸ್ತಾಕಹ್ಮದ ತಹಶೀಲ್ದಾರ, ಮುಖಂಡರಾದ ಮಂಜುನಾಥ ಮಣ್ಣಣ್ಣವರ, ಹನುಮಂತ ಬಂಡಿವಡ್ಡರ, ಮುನ್ನಾ ಲಕ್ಷ್ಮೇಶ್ವರ, ಮುಕ್ತಿಯಾರ ತಿಮ್ಮಾಪೂರ, ರಶೀದ ಗೋಟಗೋಡಿ, ಸುಮಿತ ಸೂರ್ಯವಂಶಿ, ಚಂದ್ರು ತಿಮ್ಮಾಪೂರ, ಗ್ರಾಮ ಪಂಚಾಯತ ಸದಸ್ಯ ಲಗಮಣ್ಣ ನಡಹಟ್ಟಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.