ಶಿಗ್ಗಾವ್

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದರಿಗೆ ಮತ ನೀಡಲು ಮನವಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದರಿಗೆ ಮತ ನೀಡಲು ಮನವಿ

ಲೋಕದರ್ಶನ ವರದಿ 


ಲೋಕದರ್ಶನ ವರದಿ 

ಶಿಗ್ಗಾವಿ 05: ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ಪುರಸಭೆಯ ಪಕ್ಷೇತರ ಹಾಗೂ ಕಾಂಗ್ರೇಸ ಸದಸ್ಯರನ್ನು ಭೇಟಿಯಾಗಿ ಪ್ರಥಮ ಪಾಶಸ್ತ್ಯದ ಮತವನ್ನು ಕಾಂಗ್ರೆಸ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ ಅವರಿಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಚುನಾವಣಾ ಉಸ್ತುವಾರಿ ವಸಂತ ಲದ್ವಾ ಕೋರಿದರು. 

ಬ್ಲಾಕ ಕಾಂಗ್ರೇಸ ಅಧ್ಯಕ್ಷ ಎಂ.ಎನ್‌.ವೇಂಕೋಜಿಯವರು ಕೆಲವು ಪಕ್ಷದ ತತ್ವ ಸಿದ್ದಾಂತ ಹಾಗೂ ಸಲಹೆ ಸೂಚನೆಗಳನ್ನು ಸದಸ್ಯರ ಜೊತೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಸಂಯೋಜಕಿ ಸುನೀತಾ ಹುರಕಡ್ಲಿ,  ಪುರಸಭೆ ಸದಸ್ಯ ಗೌಸಖಾನ ಮುನಶಿ, ಮುಸ್ತಾಕಹ್ಮದ ತಹಶೀಲ್ದಾರ, ವಸಂತಾ ಬಾಗೂರ, ನಶ್ರೀನಬಾನು ತಿಮ್ಮಾಪೂರ, ಮಮತಾಜ ಗೋಟಗೋಡಿ, ಮೈಮುನ್ನೀಸಾ ಲಕ್ಷ್ಮೇಶ್ವರ, ಪಕ್ಷೇತರ ಸದಸ್ಯರಾದ ಜಾಫರಖಾನ ಪಠಾಣ, ಸುಲೇಮಾನ ತರ್ಲಘಟ್ಟ ಸೇರಿದಂತೆ ಮುಖಂಡರಾದ ಶ್ರೀಕಾಂತ ಪೂಜಾರ, ಮಂಜುನಾಥ ಮಣ್ಣಣ್ಣವರ, ಹನುಮಂತ ಬಂಡಿವಡ್ಡರ, ಮಂಜುನಾಥ ತಿಮ್ಮಾಪೂರ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ