ಪ್ರದೀಪ ಮಾಳಗೆಗೆ ಕಾಂಗ್ರೆಸ್ ನಿರ್ಲಕ್ಷ್ಯ್ಷ: ಅಭಿಮಾನಿಗಳು ಅಸಮಾಧಾನ
ಲೋಕದರ್ಶನ ವರದಿ
ಚಿಕ್ಕೋಡಿ 13: ಕಳೆದ ಚುನಾವಣೆಯಲ್ಲಿ ರಾಯಬಾಗ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಪ್ರದೀಪ ಮಾಳಗೆ ಅವರಿಗೆ ಪ್ರಜಾಧ್ವನಿ ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಹಿವ್ಹಿಐಪಿ ಪಾಸ ನೀಡದೆ ಪ್ರದೀಪ ಮಾಳಗೆ ಅವರನ್ನು ನಿರ್ಲಕ್ಷ್ಯ್ಷ ಮಾಡಿದೆ ಎಂದು ಪ್ರದೀಪ ಮಾಳಗೆ ಅಭಿಮಾನಿ ಬಳಗ ಆರೋಪಿಸಿದರು.
ಚಿಕ್ಕೋಡಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ಐದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹಲವು ಕಾರ್ಯಕ್ರಮಗಳು ನಡೆದರೂ ಸಹ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರದೀಪ ಮಾಳಗೆ ಅವರಿಗೆ ಆಹ್ವಾನ ನೀಡಿರುವುದಿಲ್ಲ, ನವಸಂಕಲ್ಪ ಯಾತ್ರೆಯಲ್ಲಿಯೂ ಇದೇ ತರಹ ಪಾಸ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಕಂಕನವಾಡಿ ಪಟ್ಟಣದ ಹಾಲಪ್ಪ ಹುಕ್ಕೇರಿ ಆರೋಪಿಸಿದರು.
ಕಳೆದ ಚುನಾವಣೆಯಲ್ಲಿ ಪ್ರದೀಪ ಮಾಳಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 57 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪರಿಣಾಮ ಪ್ರದೀಪ ಮಾಳಗೆ ಅವರಿಗೆ ಹಿನ್ನಡೆಯಾಗಿದೆ. ಈಗ ಅದೇ ಬಂಡಾಯ ಅಭ್ಯರ್ಥಿ ವೇದಿಕೆ ಮೇಲೆ ಇರುತ್ತಾರೆ. ಹೀಗೆ ಅವರಿಗೊಂದು ಇವರಿಗೊಂದು ತಾರತಮ್ಯ ಮಾಡಿದರೇ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದರು.
ಕರೋಶಿ ಗ್ರಾಮದ ಗಂಗಾಧರ ದೇವರುಷಿ ಮಾತನಾಡಿ, ಪ್ರದೀಪ ಮಾಳಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸದ್ಯ ಅವರ ಪರವಾಗಿ ಅನುಕಂಪದ ಅಲೆ ಇದೆ. ಈ ಬಾರಿ ಟಿಕೆಟ ನೀಡಿದರೇ ಹೆಚ್ಚಿನ ಮತಗಳಿಂದ ಗೆಲುವು ಪಡೆಯಬಹುದಾಗಿದೆ ಎಂದರು.
ಕಲ್ಮೇಶ ಬೋರಗಾಂವೆ, ಪ್ರವೀಣ ಚೌಗಲೆ, ಶಿವಾಜಿ ವಡ್ರಾಳೆ, ಅಜ್ಜಪ್ಪ ಐಗಳೆ, ಬಾಳಪ್ಪ ಪೂಜೇರಿ, ಮುತ್ತೇಪ್ಪ ಪೂಜೇರಿ ಮುಂತಾದವರು ಇದ್ದರು.