ರಾಹುಲ್ ವಿದೇಶ ಪ್ರವಾಸ- ಸ್ಪಷ್ಟನೆ ನೀಡಿದ ಕಾಂಗ್ರೆಸ್
ನವದೆಹಲಿ,
ಡಿಸೆಂಬರ್ 28: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ ಎನ್ನುವ
ಮಾಹಿತಿ ಲಭ್ಯವಾಗಿದೆ.
ಆದರೆ ಈ ಬಗ್ಗೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿದ್ದು, ರಾಹುಲ್ ಗಾಂಧಿ ವೈಯುಕ್ತಿಕ ವಿದೇಶ ಪ್ರವಾಸದಲ್ಲಿದ್ದು ಶೀಘ್ರವೇ ದೇಶಕ್ಕೆ ಮರಳಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ,ರಾಹುಲ್ ವಿದೇಶ ಪ್ರವಾಸದಲ್ಲಿದ್ದು, ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ
ರಾಹುಲ್ ಗಾಂಧಿ ಎಲ್ಲಿಗೆ, ಯಾವ ದೇಶಕ್ಕೆ ತೆರಳಿದ್ದಾರೆ
ಎಂಬುದರ ಕುರಿತು ಸುರ್ಜೇವಾಲ ಯಾವುದೆ ಮಾಹಿತಿ ನೀಡಿಲ್ಲ. ಆದರೆ ರಾಹುಲ್ ಗಾಂಧಿ ವಿದೇಶ ಪ್ರವಾಸದ ಕುರಿತು
ಆಂಗ್ಲ ಮಾಧ್ಯಮ ವರದಿ ಮಾಡಿದ್ದು, ರಾಹುಲ್ ಖಾಸಗಿ ವಿಮಾನದ ಮೂಲಕ ಅಜ್ಜಿಯನ್ನು ಭೇಟಿ ಮಾಡಲು ಮಿಲಾನ್ ಗೆ ತೆರಳಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ
ರೈತರು ಪ್ರತಿಭಟನೆ ಸತತ 2ನೇ ತಿಂಗಳಿಗೆ ಕಾಲಿಟ್ಟಿದ್ದು, ಮತ್ತೊಂದೆಡೆ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ
ಕ್ಷಣಗಣನೆ ಆರಂಭವಾಗಿರುವಂತೆಯೇ ರಾಹುಲ್ ಗಾಂಧಿ ವಿದೇಶ ಪ್ರವಾಸ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ.