ಚಿಕ್ಕೋಡಿ

ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ

ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ

ಚಿಕ್ಕೋಡಿ 17: ಚಿಕ್ಕೋಡಿ-ಸದಲಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಪ್ರಕಾಶ ಹುಕ್ಕೇರಿ ಅವರು ಶುಭ ಮುಹೂರ್ತದಲ್ಲಿ ಸಾಂಕೇತಿಕವಾಗಿ ತಮ್ಮ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ಮಾಧವ ಗೀತ್ತೆ ಬಳಿ ಸಲ್ಲಿಸಿದರು. 

ಕ್ಷೇತ್ರದ ಮುಖಂಡರು ಮತ್ತು ಅಭ್ಯರ್ಥಿ ಗಣೇಶ ಹುಕ್ಕೇರಿ ಅವರು ನೇರವಾಗಿ ಮಿನಿವಿಧಾನಸೌಧಕ್ಕೆ ತೆರಳಿ ಎರಡು ಸೆಟ್‌ದಲ್ಲಿ ನಾಮಪತ್ರ ಸಲ್ಲಿಸಿದರು.  

ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಜನರ ಸೇವೆ ಮಾಡುವ ಅವಕಾಶವನ್ನು ಸಮರ​‍್ಕವಾಗಿ ಬಳಸಿಕೊಂಡಿದ್ದು, ಈಗ ಮತ್ತೋಮ್ಮೆ ಜನ ಸೇವೆ ಮಾಡಲು ಈ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಸಾಂಕೇತಿಕವಾಗಿ ಈಗ ನಾಮಪತ್ರ ಸಲ್ಲಿಸಲಾಗಿದೆ. ರಾಜ್ಯ ನಾಯಕರು ಕ್ಷೇತ್ರಕ್ಕೆ ಆಗಮೀಸಲಿದ್ದು, ಅವರ ಪ್ರವಾಸದ ದಿನಾಂಕ ನೋಡಿಕೊಂಡು ಹೆಚ್ಚು ಜನರನ್ನು ಸೇರಿಸಿ ಚಿಕ್ಕೋಡಿಯಲ್ಲಿ ಮೆರವಣಿಗೆ ಮಾಡಿ ನಾಮಪತ್ರ ಸಲ್ಲಿಸಲಾಗುತ್ತದೆ ಎಂದರು. 

ನಮ್ಮ ಎದುರಾಳಿ ಯಾರೇಯಾದರೂ ನಮ್ಮ ಕೆಲಸ ನೋಡಿ ಜನ ನಮಗೆ ಮತವನ್ನು ನೀಡಲಿದ್ದಾರೆ. ಕ್ಷೇತ್ರದಲ್ಲಿ ಹುಕ್ಕೇರಿ ಕುಟುಂಬ ಮಾಡಿರುವ ಸೇವೆ ಪರಿಗಣಿಸಿ ಮತ ನೀಡಲಿದ್ದಾರೆ. ಕ್ಷೇತ್ರದಲ್ಲಿ ಉಂಟಾಗಿರುವ ಭೀಕರ ಪ್ರವಾಹ ಮತ್ತು ಕೊರೊನಾದಂತಹ ಕಠಿನ ಪರಿಸ್ಥಿತಿಯಲ್ಲಿ ಜನರ ಜೊತೆ ನಾನು ಮತ್ತು ನಮ್ಮ ತಂದೆಯವರು ಹಗಲಿರುಳು ಸೇವೆ ಮಾಡಿದ್ದು, ಈ ಚುನಾವಣೆಯಲ್ಲಿ ಜನರು ನಮ್ಮ ಕೈ ಬಿಡುದಿಲ್ಲ ಎಂಬ ವಿಶ್ವಾಸ ಇದೆ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಮಿರ್ಜೆ, ಮಲ್ಲಿಕಾರ್ಜುನ ಪಾಟೀಲ, ಅನಿಲ ಪಾಟೀಲ, ಸಾಭೀರ ಜಮಾದಾರ, ಪ್ರಭಾಕರ ಈ ಕೋರೆ, ಗುಲಾಬ ಬಾಗವಾನ, ನರೇಂದ್ರ ನೇರ್ಲಿಕರ, ಅನಿಲ ಪಾಟೀಲ, ರಾಮಾ ಮಾನೆ, ಶಾಮ ರೇವಡೆ, ಮುದ್ದಸರ ಜಮಾದಾರ ಸೇರಿದಂತೆ ಮುಂತಾದವರು ಇದ್ದರು. 


ಸುದ್ದಿ ಓದಿ