ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿಯಲ್ಲಿ ಗೊಂದಲ: ಹೆಬ್ಬಾಳಕರ
ಲೋಕದರ್ಶನ ವರದಿ
ಅಥಣಿ 02: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸ್ಪರ್ಧೆಯಿಂದ ಬಿಜೆಪಿಯಲ್ಲಿ ಗೊಂದಲ ಮೂಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ, ಕಾರ್ಯಕರ್ತರಲ್ಲಿ, ಮುಖಂಡರಲ್ಲಿ, ಪದಾಧಿಕಾರಿಗಳಲ್ಲಿ ಜೊತೆಗೆ ಕಾಂಗ್ರೆಸ್ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಸದಸ್ಯ ಮತದಾರರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ತಾಲೂಕಿನ ಮುರುಗುಂಡಿ ಗ್ರಾಮದ ಮುರಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಮುರಗುಂಡಿ ಹಾಗೂ ತಂಗಡಿ ಗ್ರಾಮ ಪಂಚಾಯತ ಸದಸ್ಯರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಸಹೋದರ ಚನ್ನರಾಜ ಹಟ್ಟಿಹೋಳಿ ಪ್ರತಿ ಮೂರು ತಿಂಗಳಿಗೊಮ್ಮೆಯಾದರೂ ಎಲ್ಲ ಪಂಚಾಯತಗಳಿಗೆ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ ಬಗೆ ಹರಿಸುವ ಯತ್ನ ಮಾಡುತ್ತಾರೆ ಇಂತಹ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಅಥಣಿ ಉಪ ಚುನಾವಣಾ ಅಭ್ಯರ್ಥಿ ಗಜಾನನ ಮಂಗಸೂಳಿ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಧುರೀಣರಾದ ಎಸ್.ಕೆ.ಬುಟಾಳಿ, ರಾವಸಾಹೇಬ ಐಹೊಳೆ, ಸಿದ್ಧಾರ್ಥ ಸಿಂಗೆ, ಅಸ್ಲಂ ನಾಲಬಂದ, ಅನೀಲ ಸುಣಧೋಳಿ, ಸುರೇಶ ಪಾಟೀಲ, ಬಸವರಾಜ ಬುಟಾಳಿ, ಶಿವು ಗುಡ್ಡಾಪೂರ, ಸೈಯ್ಯದ ಅಮೀನ ಗದ್ಯಾಳ, ಓಂಪ್ರಕಾಶ ಪಾಟೀಲ, ಭರಮಾ ಮಗಾಡಿ, ಬಸವರಾಜ ಪಾಟೀಲ, ನೀಲವ್ವಾ ಕರಿಸಿದ್ಧಗೋಳ, ಮಾಲಾಶ್ರೀ ನಾಯಿಕ, ಅಕ್ಕವ್ವಾ ಬಾಳಿಗೇರಿ, ಚಂದ್ರಕಾಂತ ನಂದಿವಾಲೆ, ರಮೇಶ ಕುಸನಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.