ಇಂಡಿ

ಶಾಲಾ ಸಂಸತ್ತು ಚುನಾವಣೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು

ಶಾಲಾ ಸಂಸತ್ತು ಚುನಾವಣೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು

ಇಂಡಿ: ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ  ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ,ಪ್ರೌಢ ಹಾಗೂ  ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ನಡೆದ ಶಾಲಾ ಸಂಸತ್ತು ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನಿಂತು  ಹುರುಪಿನಿಂದ ಮತದಾನ ಮಾಡಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು. 

ಒಂದು ವಾರದಿಂದ ಪ್ರಾರಂಭವಾದ ಈ ಪ್ರಕ್ರಿಯೆಯು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲೆ ನಾಮಪತ್ರ ವಿತರಣೆ, ನಾಮಪತ್ರ ಸಲ್ಲಿಸುವುದು, ಪರೀಶೀಲನೆ, ಹಿಂತೆಗೆದುಕೊಳ್ಳುವುದು, ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿನ್ನೆ ನೀಡುವುದು, ಮತಗಟ್ಟೆ, ನೈಜ ಮತಪೆಟ್ಟಿಗೆ, ಮತ ಪತ್ರ, ವಿಭೇದಕ ಗುರುತು, ಚುನಾವಣಾ ಅಧಿಕಾರಿಗಳ ಮತ್ತು ಸಿಬ್ಬಂದಿ ನೇಮಕ,ಮತ ಎಣಿಕೆ ಹೀಗೆ ನೈಜ ಚುನಾವಣೆಯ ಮಾದರಿಯಲ್ಲೆ ಶಾಲಾ ಸಂಸತ್ತು ಚುನಾವಣೆ ನಡೆಯಿತು. 

ಶಾಲೆಯ ಅಧ್ಯಕ್ಷ ವಿ.ಜಿ.ಕಲ್ಮನಿ ಅವರು ಮುಖ್ಯಚುನಾವಣಾಧಿಕಾರಿಗಳಾಗಿ ಮಾತನಾಡಿ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು ಮೂಡುತ್ತದೆ, ಮುಂದೆ ಜವಾಬ್ದಾರಿಯುತ ನಾಗರಿಕರಾಗಿ ಉತ್ತಮ ನಾಯಕನನ್ನು ಆಯ್ಕೆ ಮಾಡುವುದರ ಜೊತೆಗೆ ನಾಯಕತ್ವದ ಗುಣ ಬೆಳೆಯುತ್ತದೆ  ಎಂದು ಹೇಳಿದರು.ಚುನಾವಣೆಯ ವೀಕ್ಷಣೆಗೆ ಆಗಮಿಸಿದ ಗ್ರಾಮದ ಪೊಜ್ಯರಾದ ವೇದಮೊರ್ತಿ ದಯಾನಂದ ಸ್ವಾಮಿಗಳು ಮತಪೆಟ್ಟಿಗೆ ಪೊಜೆ ನೆರವೇರಿಸಿ ಮಾತನಾಡಿ ಈ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನಡೆಯುತ್ತವೆ, ಈ ಚುನಾವಣೆ ಸಿದ್ದತೆ ನೋಡಿದರೆ ನೈಜ ಚುನಾವಣೆಯನ್ನು ಮೀರಿಸುವ ಹಾಗೆ ಇದೆ ಎಂದರು. 

ಚುನಾವಣೆ ವೀಕ್ಷಣೆಗಾಗಿ ಪೂಜ್ಯರಾದ ಹಣಮಂತ ಮಾರಾಯ, ಕಲ್ಮನಿ ಮಾಜಿ ಗ್ರಾ.ಪಂ.ಅಧ್ಯಕ್ಷರಾದ ರಮೇಶ ತಮಶೆಟ್ಟಿ ಪಿಕೆಪಿಎಸ್ ನಿರ್ದೇಶಕ ಭಿಮರಾಯ ಮೇತ್ರಿ ,ಗ್ರಾ ಪಂ ಸದಸ್ಯರಾದ ಸಾಹೇಬಗೌಡ ಪಾಟೀಲ,ರಾಜೇಶ ಪವಾರ, ಧರೆಪ್ಪ ಕಲ್ಮನಿ, ಮುತ್ತುಗೌಡ ಬಿರಾದಾರ,ಮಂಜು ಜಮಾದಾರ,ಗಣ್ಯರಾದ  ಗೀರೀಶ ಪಾಟೀಲ, ಮಾಯಪ್ಪ ಪರಗೊಂಡ, ಸೋಮು ಕುಂಬಾರ, ರಾಜಶೇಖರ ಪಡನೂರ ಜೈನೂದ್ದಿನ ಮುಜಾವರ ಉಪಸ್ಥತರಿದ್ದರು.    

ಆಡಳಿತಾಧಿಕಾರಿಗಳಾದ ಎಸ್‌.ಪಿ. ಕಲ್ಮನಿ, ಶಿಕ್ಷಕರಾದ ವಿ.ಜಿ. ಚವ್ಹಾಣ, ಸುನೀಲ.ವಿ.ಆರ್, ಸಚಿನ ಅಡಿಗುಂಡಿ, ಶಿವಾನಂದ ಕಲ್ಮನಿ, ತುಕಾರಾಮ ಚವ್ಹಾಣ, ಪ್ರಕಾಶ ಕಲ್ಮನಿ, ಬಸವರಾಜ ಶಿರಣಗಾರ, ಕಿರಣ ಗೌಡ,ಪವನ ಕಾಂಬಳೆ, ಎಲ್‌.ಎನ್‌.ಕರ್ಜಗಿ, ಜೆ.ಎ.ಬಿರಾದಾರ, ಎಸ್‌ಎಮ್‌.ಭಾಷಗಿ, ಬಿ.ಕೆ.ಉಕಲಿ, ಬಿ.ಎಸ್‌.ನಾಟೀಕಾರ, ರಾಜಶ್ರೀ ಸಂಗಮ, ಕುಮಾರಿ ರಾಜೇಶ್ವರಿ ಗೌಡ,ಅ ನಿತಾ.ಗೌಡ, ಪೇಬಾ.ಶಾಮ್, ಗಿರಿಜಾ ಬಾಗೇವಡಿ, ಪುಷ್ಪಾ.ಬಾಬಳಗಿ ಚೂನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.  

ಸುದ್ದಿ ಓದಿ