ದಲಿತ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಮನವಿ
ಶಿಗ್ಗಾವಿ 04: ಗದಗ ಜಿಲ್ಲಾ ನರಗುಂದ ತಾಲೂಕಾ ನರಗುಂದ ಪಟ್ಟಣದಲ್ಲಿ ದಲಿತ ವಿದ್ಯಾರ್ಥಿನಿ ಮಧು ಹುಲಿಸ್ಯಾರ ಹತ್ಯೆ ಖಂಡಿಸಿ ಕರ್ನಾಟಕ ಭೀಮ ಸೇನಾ ಸಮಿತಿ ಮತ್ತ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ ಮಂಜುನಾಥ ಮುನ್ನೊಳ್ಳಿ ಅವರ ಮುಖಾಂತರ ರಾಜ್ಯಪಾಲರಿಗೆ ಶನಿವಾರ ಮನವಿ ಅರ್ಪಿಸಿದರು.
ನರಗುಂದದ ದಲಿತ ವಿದ್ಯಾರ್ಥಿನಿಯನ್ನು ಕೆಲವು ದಿನಗಳ ಹಿಂದೆ ಅಪಹರಿಸಿ, ಅತ್ಯಾಚಾರಗೈದು, ಆಸಿಡ್ ಹಾಕಿ, ಕೈಯನ್ನು ಕತ್ತರಿಸಿ ಕ್ರೂರವಾಗಿ ಚಿತ್ರಹಿಂಸೆ ಕೊಟ್ಟು ಹತ್ಯೆಗೈದಿರುತ್ತಾರೆ, ಇದೇ ರೀತಿಯಲ್ಲಿ ಹಿಂದೂ ಕೂಡಾ ದಲಿತ ಮಹಿಳೆಯರ ಮೇಲೆ ಪದೆ ಪದೆ ಅತ್ಯಾಚಾರಗಳು ಹಾಗೂ ಹತ್ಯೆಗಳು ನಡೆಯುತ್ತಿದ್ದು ಡಾ ಅಂಬೇಡ್ಕರ ಅವರ ಮಹಿಳಾ ಸಬಲೀಕರಣಕ್ಕೆ ಹಲವಾರು ರೀತಿಯ ಭದ್ರತೆ ನೀಡಿದರೂ ಇಂತಹ ಘಟನೆಗಳು ನಡೆಯುತ್ತಿರುವದು ಅಮಾನವಿಯ ಕೃತ್ಯವಾಗಿದೆ, ಸರ್ಕಾರ ಮಹಿಳೆಯರಿಗೆ ಭದ್ರತೆ ಒದಗಿಸಬೇಕು, ಕ್ರೂರವಾಗಿ ಹತ್ಯೆ ಮಾಡಿದ ಅಪರಾಧಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು, ಮತ್ತು ಸರ್ಕಾರ ಈ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತೆಗೆದುಕೊಂಡು ಕ್ರಮ ಜರೂಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಹ ಎಂದರು ಮನವಿಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ತಾಪಂ ಕಾರ್ಯನಿರ್ವಾಕ ಅಧಿಕಾರಿ ಪ್ರಶಾಂತ ತುರ್ಕಾಣಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ದಲಿತ ಸಂಘರ್ಷ ಸಮಿತಿಯ ತಾಲೂಕಾ ಅಧ್ಯಕ್ಷ ಹನಮಂತಪ್ಪ ಮಾದರ, ಕರ್ನಾಟಕ ಭೀಮ ಸೇನಾ ಸಮಿತಿಯ ತಾಲೂಕಾ ಅಧ್ಯಕ್ಷ ಮಂಜುನಾಥ ಇಂಗಳಗಿ, ಭಾಜಪ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ನ್ಯಾಯವಾದಿ ಹನುಮಂತಪ್ಪ ಬಂಡಿವಡ್ಡರ, ಮುಖಂಡ ಮಲ್ಲೇಶಪ್ಪ ಹರಿಜನ, ಅಶೋಕ ಕಾಳೆ, ಸುರೇಶ ಹರಿಜನ, ಬಸವರಾಜ ಕಟ್ಟಿಮನಿ, ಯಲ್ಲಪ್ಪ ಮಾದರ, ಸೇರಿದಂತೆ ಪದಾಧಿಕಾರಿಗಳು ಇದ್ದರು.