ಯರಗಟ್ಟಿ

ಶ್ರೀರಂಗಪೂರದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಶ್ರೀರಂಗಪೂರದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಯರಗಟ್ಟಿ 09: ತಾಲೂಕಿನ ಶ್ರೀರಂಗಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೆನಕಟ್ಟಿ ಶಾಲೆಯಲ್ಲಿ ನಡೆದ ಕೇಂದ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಗಣೇಶ ಸಿಂಗಾಡಿ ಉದ್ದ ಜಿಗಿತ ಪ್ರಥಮ, ಶ್ರೀಧರ ಪಚ್ಚಿನವರ 400 ಮೀ ಓಟ ಪ್ರಥಮ, ದೀಪಾ ಪಚ್ಚಿನವರ ಚಕ್ರ ಎಸೆತ ಮತ್ತು ಗುಂಡು ಎಸೆತ ಪ್ರಥಮ, ಥ್ರೋಬಾಲ್ ಬಾಲಕ, ಬಾಲಕಿಯರು ಪ್ರಥಮ ಹಾಗೂ ಪ್ರವೀಣ ನಾಗನೂರ ಗುಂಡು ಎಸೆತ ದ್ವಿತೀಯ, ಶ್ರದ್ಧಾ ಪಚ್ಚಿನವರ ಚಕ್ರ ಎಸೆತ ದ್ವಿತೀಯ, ಹೇಮಾ ಕುರಿ ಎತ್ತರ ಜಿಗಿತ ದ್ವಿತೀಯ, ರಾಧಿಕಾ ಬೇವಿನಗಿಡದ ಗುಂಡು ಎಸೆತ ದ್ವಿತೀಯ, ಹೇಮಾ ಕುರಿಉದ್ದ ಜಿಗಿತ ದ್ವಿತೀಯ ಸ್ಥಾನ ಪಡೆದುಕೊಂಡು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಫಕೀರ​‍್ಪ ಮನಿಕಟ್ಟಿ, ಉಪಾಧ್ಯಕ್ಷ ಗಂಗಪ್ಪ ಗುಂಡ್ಲಮನಿ ಹಾಗೂ ಸದಸ್ಯರು, ಗ್ರಾಮದ ಗುರುಹಿರಿಯರು,  ಶಾಲೆಯ ಪ್ರಧಾನ ಗುರುಗಳಾದ ವಿ.ಪಿ.ಸೋನೊನೆ, ಸಹಶಿಕ್ಷಕರಾದ ಬಿ.ಜಿ.ದೇವಡಿ, ಎಮ್‌.ಎಫ್‌.ಅಗಸಿಮನಿ, ಜಿ.ಎಮ್‌.ಹಣಜಿ, ಜಿ.ಪಿ.ಬೆಳಗಾವಿ. ಎಸ್‌.ಪಿ.ರಂಗಿ, ಅತಿಥಿ ಶಿಕ್ಷಕರಾದ ಎಸ್‌.ಜಿ.ಸುಣಗಾರ, ಎಫ್‌.ಎ.ಪಚ್ಚಿನವರ, ಎಮ್‌.ಎಮ್‌.ಕಲಕುಟ್ರಿ, ಎಲ್‌.ಆರ್‌.ಸೂರಣಗಿ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ