ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರವಾಣಿ ಮೂಲಕ ದೂರು

ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರವಾಣಿ ಮೂಲಕ ದೂರು

ಬಳ್ಳಾರಿ 14: ಸಕರ್ಾರಿ ಕಚೇರಿಗಳಲ್ಲಿ ಕೆಲಸ ಮಾಡಿ ಕೊಡಲು ಅಧಿಕಾರಿಗಳು ಹಣದ ಬೇಡಿಕೆ ಇಟ್ಟರೆ ತಕ್ಷಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಬೇಕು.  ದೂರವಾಣಿ ಮೂಲಕವೂ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ ದೊಡ್ಡಿ ಹೇಳಿದರು. ನಗರದ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಳ್ಳಾರಿ ಕೇಂದ್ರ ಕಚೇರಿಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಸಕರ್ಾರಿ ಕಚೇರಿಯಲ್ಲಿ ಹಣ ಬೇಡಿಕೆ, ಮಧ್ಯವತರ್ಿ ಹಾಗೂ ಇತರೆ ಅನಾವಶ್ಯಕವಾಗಿ ಹಣ ಕೇಳಿದಲ್ಲಿ ಎಸಿಬಿ ಕಚೇರಿಯ ದೂರವಾಣಿಗೆ ತಿಳಿಸಿ ದೂರು ದಾಖಲಿಸಿ ಎಂದರು.  ಯಾವುದೇ ಕಾರಣಕ್ಕೂ ದೂರು ದಾಖಲಿಸಲು ಹಿಂಜರಿಯಬೇಡಿ, ಅವರು ಯಾರೇ ಆಗಿದ್ದರು ಅವರ ವಿರುದ್ಧ ನಿದರ್ಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು. 

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಂಬಂಧಿಸಿದ ಮಾಹಿತಿ ಇದ್ದರೆ ಅಥವಾ ದೂರು ದಾಖಲಿಸಲು ಎಸಿಬಿ ಎಸ್ಪಿ ಮೊ: 9480806210, ಎಸಿಬಿ ಡಿಎಸ್ಪಿ- 9480806243, ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಧರ್ದೊಡ್ಡಿ- 9480806316, ಎಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಪ್ರಭುಲಿಂಗ ಹಿರೆಮಠ್-9480806315 ಗೆ ಸಂಪಕರ್ಿಸಿ ದೂರುಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು. ಪೊಲೀಸ್ ಹೆಡ್ ಕಾನ್ಸ್ಟೇಬಲ್ ತಿಮ್ಮಾರೆಡ್ಡಿ, ಪ್ರಸಾದ್, ಪ್ರಕಾಶ್, ಯುವರಾಜ್ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ