ಅರಣ್ಯ ರಕ್ಷಣೆಗೆ ಸಮುದಾಯದ ಸಹಭಾಗಿತ್ವ ಅವಶ್ಯ: ಪಾಟೀಲ
ತಾಳಿಕೋಟೆ 30: ಪರಿಸರ ರಕ್ಷಣೆ ಆಗಬೇಕಾದರೇ ಸಮುದಾಯದ ಸಹಭಾಗಿತ್ವ ಅತ್ಯವಶ್ಯಕವಾಗಿದೆ. ಮತಕ್ಷೇತ್ರದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಾಗಿಸಲು ಅರಣ್ಯ ಇಲಾಖೆ ಸರ್ವ ಪ್ರಯತ್ನಮಾಡುತ್ತಿದೆ. ಕ್ರೀಯಾಶೀಲ ಸಂಘಗಳು ಕೈಜೋಡಿಸುತ್ತಿರುವದು ಸ್ವಾಗತಾರ್ಹವಾಗಿದೆ ಎಂದು ಎಂದು ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.
ಅವರು ಅಮೃತ ಸ್ವಾತಂತ್ರ-್ಯ ಮಹೋತ್ಸವದ ಅಂಗವಾಗಿ ಪಟ್ಟಣದ ಹಸಿರು ಸಂಪದ ಬಳಗ, ಪುರಸಭೆ, ಎಸ್.ಕೆ.ಕಾಲೇಜಿನ ಎಕೋ ಕ್ಲಬ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಅರಣ್ಯ ಇಲಾಖೆ(ಸಾಮಾಜಿಕ ಹಾಗೂ ನಿಯಮಿತ) ಮುದ್ದೇಬಿಹಾಳ, ಕೆಬಿಜೆಎನ್ನೆಲ್ ಅರಣ್ಯ ವಿಭಾಗ ಆಲಮಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಕೆ.ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ತಾಳಿಕೋಟೆ ತಾಲ್ಲೂಕು ಮಟ್ಟದ ಪರಿಸರ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಹಸಿರು ಸಂಪದ ಬಳಗ, ಹಸಿರು ತೋರಣ ಬಳಗಳಂತಹ ಪರಿಸರ ಸಂಘಟನೆಗಳು ಕೈಜೋಡಿಸಿವೆ. ಇದರಿಂದ ಪರಸರ ಪ್ರೀತಿ ಹೆಚ್ಚಾಗುವದರಲ್ಲಿ ಯಾವುದೇ ಸಂಶಯವಿಲ್ಲ. ತಾಲ್ಲೂಕಿನಲ್ಲಿ ಮುಂದಿನ ದಿನಮಾನಗಳಲ್ಲಿ ಪ್ರತಿ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿ ಮಾಡಲಾಗುವುದು. ಗ್ರಾಮಗಳ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುತ್ತೇನೆ. ಮಾದರಿ ತಾಲ್ಲೂಕು ಮಾಡುತ್ತೇನೆ. ಪಟ್ಟಣಕ್ಕೆ 22*7 ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲಿಯೇ ಜಾರಿಯಾಗಲಿದೆ. ಅಮೃತ ಸ್ವಾತಂತ್ರ-್ಯ ಮಹೋತ್ಸವದ ಕಾರ್ಯಕ್ರಮವನ್ನು ಮನೆಯ ಹಬ್ಬಕ್ಕಿಂತ ಹೆಚ್ಚು ಸಡಗರದಿಂದ ಆಚರಿಸೋಣ ಎಂದರು.
ತಹಶೀಲ್ದಾರ ಶ್ರೀಧರ ಗೋಟೂರ ಮಾತನಾಡಿ ಸಸಿಗಳನ್ನ ಮಕ್ಕಳ ತರ ಸಸಿ ಬೆಳೆಸಿ ತಾಳಿಕೋಟೆ ಪಟ್ಟಣ ಹಸಿರಾಗುವಲ್ಲಿ ಹಸಿರು ಸಂಪದ ಬಳಗದ ಕಾರ್ಯ ಶ್ಲಾಘನೀಯ. ನಮ್ಮ ಜೀವನ ಶೈಲಿ ಪರಿಸರ ಸ್ನೇಹಿಯಾಗಿರಲಿ ಎಂದರು.
ಸನ್ಮಾನಿತರಾದ ಆರ್ಎಫ್ಓ ಎಸ್.ಜಿ.ಸಂಗಲಾಕ ಮಾತನಾಡಿ ಉತ್ತಮ ಭವಿಷ್ಯಕ್ಕಾಗಿ ವೃಕ್ಷ ಆವರಣ ಬೇಕು. ಹಸಿರು ಬೆಳೆಸುವದು ನಿಸ್ವಾರ್ಥ ಸೇವೆಯಾಗಿದೆ. ಪ್ಲಾಸ್ಟಿಕ್ ಬ್ಯಾಗಗಳನ್ನ ಸ್ವಯಂ ನಿಷೇಧ ಮಾಡಿಕೊಳ್ಳಬೇಕು ಎಂದರು. ಶಿಕ್ಷಕರೊಂದಿಗೆ ಸಂವಾದ ನಡೆಯಿತು. ಸಾಹಿತಿ ಅಶೋಕ ಹಂಚಲಿ ಮಾತನಾಡಿದರು.
ಅಧ್ಯಕ್ಷತೆಯನ್ನು ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ ವಹಿಸಿದ್ದರು. ಎಸ್.ಕೆ.ಕಾಲೇಜು ಚೇರ್ಮನ್ನ ವಿ.ಸಿ.ಹಿರೇಮಠ, ಮುದ್ದೇಬಿಹಾಳ ಬಿಇಓ ಎಸ್.ಜೆ.ನಾಯಕ, ತಾಲ್ಲೂಕು ಪಂಚಾಯತಿ ಇ.ಓ ಬಿ.ಆರ್.ಬಿರಾದಾರ, ಪುರಸಭೆ ಅಧ್ಯಕ್ಷ ಸಂಗಮೇಶ ಇಂಗಳಗಿ, ಸದಸ್ಯ ವಾಸುದೇವ ಹೆಬಸೂರ, ಶಿಕ್ಷಣ ಸಂಯೋಜಕ ಸುರೇಶ ಹಿರೇಮಠ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಇದ್ದರು.
ಸನ್ಮಾನ :- ಇದೇ ಸಂದರ್ಭದಲ್ಲಿ ನೂತನ ಬಿಇಓ ಎಸ್.ಜೆ.ನಾಯಕ, ಮುದ್ದೇಬಿಹಾಳ ಸಾಮಾಜಿಕ ಅರಣ್ಯ ವಲಯದ ಆರ್.ಎಫ್.ಓ ಎಸ್.ಜಿ.ಸಂಗಾಲಿಕ, ಪ್ರಾದೇಶಿಕ ಅರಣ್ಯ ವಲಯದ ಅರಣ್ಯ ರಕ್ಷಕ ಮಹಾಂತೇಶ ಹಾದಿಮನಿ ಹಾಗೂ ನೆಡುತೋಪು ಕಾವಲುಗಾರ ಮೌಲಾಸಾಬ ನದಾಫ ಅವರನ್ನು ಗೌರವಿಸಲಾಯಿತು. ಪ್ರಾಸ್ತಾವಿಕವಾಗಿ ಬಳಗದ ಸಂಚಾಲಕ ಶರಣು ಗಡೇದ ಮಾತನಾಡಿದರು. ಅನುಷ್ಕಾ ಮಿರಜಕರ, ಲಕ್ಷಿ-್ಮ ಬಾಗೇವಾಡಿ ಪ್ರಾರ್ಥಿಸಿದರು. ಅಜೀತ ಯಾಳಗಿ, ಗುಂಡುರಾವ್ ಧನಪಾಲ ನಿರ್ವಹಿಸಿದರು. ಅಪ್ಪಾಸಾಹೇಬ ಮೂಲಿಮನಿ ಸ್ವಾಗತಿಸಿದರು ಸಮಾವೇಶದಲ್ಲಿ ಬಾಳುಭಕ್ಷಿ ಕರ್ಮಕರ, ಪುರಸಭೆ ಸದಸ್ಯ ಜೈಸಿಂಗ ಮೂಲಿಮನಿ, ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಸಾಹಿತಿ ಶ್ರೀಕಾಂತ ಪತ್ತಾರ, ಕಾಶಿನಾಥ ಮುರಾಳ, ಪ್ರಾಚಾರ್ಯ ಎಸ್.ವಿ.ಜಾಲವಾದಿ, ಎಕೋ ಕ್ಲಬ್ ಅಧಿಕಾರಿ ಆರ್.ವಿ.ಮಿಸ್ಕಿನ್, ಶ್ರೀಶೈಲ ಹೂಗಾರ, ಸಿಆರ್ಿಗಳು, ಶಿಕ್ಷಕರು ಇದ್ದರು.